ಮಹಿಳಾ ಸಂಸದೆಯಿಂದ ಹಣ ಕಸಿದುಕೊಂಡ ಪ್ರಕರಣ : ಆರೋಪಿ ಬಂಧನ
ನವದೆಹಲಿ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಜಧಾನಿ ದೆಹಲಿಯಲ್ಲಿ ಮಹಿಳಾ ಸಂಸದೆಯೊಬ್ಬರಿಂದ ಹಣ ಕಸಿದುಕೊಂಡಿರುವ ಪ್ರಕರಣವನ್ನು ದಕ್ಷಿಣ ಜಿಲ್ಲೆಯ ಆಟೋ ಕಳ್ಳತನ ವಿರೋಧಿ ದಳ ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದು, ಪ್ರಮುಖ ಆರೋಪಿ ಸೋಹನ್ ರಾವತ್ ಅಲಿಯಾಸ್ ಸೋನು ಅಲಿಯಾಸ್ ಬಗ್ಗು (24) ಅನ್ನು ಬಂಧಿಸಲಾಗಿದ
ಮಹಿಳಾ ಸಂಸದೆಯಿಂದ ಹಣ ಕಸಿದುಕೊಂಡ ಪ್ರಕರಣ : ಆರೋಪಿ ಬಂಧನ


ನವದೆಹಲಿ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಜಧಾನಿ ದೆಹಲಿಯಲ್ಲಿ ಮಹಿಳಾ ಸಂಸದೆಯೊಬ್ಬರಿಂದ ಹಣ ಕಸಿದುಕೊಂಡಿರುವ ಪ್ರಕರಣವನ್ನು ದಕ್ಷಿಣ ಜಿಲ್ಲೆಯ ಆಟೋ ಕಳ್ಳತನ ವಿರೋಧಿ ದಳ ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದು, ಪ್ರಮುಖ ಆರೋಪಿ ಸೋಹನ್ ರಾವತ್ ಅಲಿಯಾಸ್ ಸೋನು ಅಲಿಯಾಸ್ ಬಗ್ಗು (24) ಅನ್ನು ಬಂಧಿಸಲಾಗಿದೆ.

ಆರೋಪಿ ದೆಹಲಿಯ ಓಖ್ಲಾ ಕೈಗಾರಿಕಾ ಪ್ರದೇಶದ ನಿವಾಸಿಯಾಗಿದ್ದು, ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈತನ ವಿರುದ್ಧ ದೆಹಲಿಯ 15 ಕ್ಕೂ ಹೆಚ್ಚು ಠಾಣೆಗಳಲ್ಲಿ 26 ಅಪರಾಧ ಪ್ರಕರಣಗಳು ದಾಖಲಾಗಿವೆ.

ಪೊಲೀಸರು ಆರೋಪಿಯಿಂದ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಭದ್ರತಾ ಕಾರಣಗಳಿಂದ ಮಹಿಳಾ ಸಂಸದೆಯ ಮಾಹಿತಿ ಬಹಿರಂಗ ಪಡಿಸಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande