ರೋಹ್ಟಕ್, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿರುವ ಹರಿಯಾಣದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರು ರಾಮ್ ರಹೀಮ್ ಅವರಿಗೆ 40 ದಿನಗಳ ಪೆರೋಲ್ ಮಂಜೂರಾಗಿದ್ದು, ಮಂಗಳವಾರ ಬೆಳಿಗ್ಗೆ ಬಿಗಿ ಭದ್ರತೆಯ ನಡುವೆ ಸುನಾರಿಯಾ ಜೈಲಿನಿಂದ ಹೊರಬಂದಿದ್ದಾರೆ.
ಬೆಳಿಗ್ಗೆ 7 ಗಂಟೆ ವೇಳೆಗೆ ಜೈಲಿನಿಂದ ಬಿಡುಗಡೆಯಾದ ರಾಮ್ ರಹೀಮ್ ಅವರ 58ನೇ ಹುಟ್ಟುಹಬ್ಬ ಆಗಸ್ಟ್ 15ರಂದು ಇದ್ದು, ಡೇರಾ ಆಶ್ರಮದಲ್ಲಿಯೇ ಆಚರಿಸಿಕೊಳ್ಳಲಿದ್ದಾರೆ.
ಪೆರೋಲ್ ನಿಯಮಗಳ ಪ್ರಕಾರ, ಸಾರ್ವಜನಿಕ ಸಮಾವೇಶಗಳ ಅನುಮತಿ ನೀಡಿಲ್ಲವಾದರೂ, ತಮ್ಮ ಅನುಯಾಯಿಗಳಿಗೆ ವರ್ಚುವಲ್ ಮುಖಾಂತರ ಮಾತನಾಡುವ ಅವಕಾಶ ಮಾತ್ರ ನೀಡಲಾಗಿದೆ
ಈವರೆಗೆ ರಾಮ್ ರಹೀಮ್ 14 ಬಾರಿ ಪೆರೋಲ್ ರಜೆ ಪಡೆದಿದ್ದು, ಇತ್ತೀಚೆಗೆ ಏಪ್ರಿಲ್ 9ರಂದು 21 ದಿನಗಳ ಪೆರೋಲ್ ಮಂಜೂರಾಗಿತ್ತು.
ಜೈಲು ಸೂಪರಿಂಟೆಂಡೆಂಟ್ ಸತ್ಯವಾನ್ ಅವರು ನಿಯಮಾನುಸಾರ ಪೆರೋಲ್ ಮಂಜೂರು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa