ಗಣಿ‌ ಸಚಿವರೊಂದಿಗೆ ಶೀಘ್ರ ಸಭೆ : ಎನ್ಎಸ್ ಬೋಸರಾಜು
ಹಟ್ಟಿ ಚಿನ್ನದ ಗಣಿ , 05 ಆಗಸ್ಟ್ (ಹಿ.ಸ.) : ಆ್ಯಂಕರ್ : ನಾಳೆ ಹಟ್ಟಿ ಚಿನ್ನದ ಗಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಹಿನ್ನಲೆ ಕಾರ್ಯಕ್ರಮದ ಸಿದ್ದತೆ ಕುರಿತು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್. ಎಸ್. ಬೋಸರಾಜು ಅವರು ಹಟ್ಟಿ ಚಿನ್ನದ ಗಣಿ ನಿರ
ಗಣಿ ಕಾರ್ಮಿಕರ ಸಮಸ್ಯೆಗಳ ಕುರಿತು ಗಣಿ‌ ಸಚಿವರೊಂದಿಗೆ ಶೀಘ್ರ ಸಭೆ- ಎನ್ಎಸ್ ಬೋಸರಾಜು


ಗಣಿ ಕಾರ್ಮಿಕರ ಸಮಸ್ಯೆಗಳ ಕುರಿತು ಗಣಿ‌ ಸಚಿವರೊಂದಿಗೆ ಶೀಘ್ರ ಸಭೆ- ಎನ್ಎಸ್ ಬೋಸರಾಜು


ಹಟ್ಟಿ ಚಿನ್ನದ ಗಣಿ , 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ನಾಳೆ ಹಟ್ಟಿ ಚಿನ್ನದ ಗಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಹಿನ್ನಲೆ ಕಾರ್ಯಕ್ರಮದ ಸಿದ್ದತೆ ಕುರಿತು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್. ಎಸ್. ಬೋಸರಾಜು ಅವರು ಹಟ್ಟಿ ಚಿನ್ನದ ಗಣಿ ನಿರ್ದೇಶಕಿ ಶಿಲ್ಪಾ ಅವರೊಂದಿಗೆ ಮಾಹಿತಿ ಪಡೆದರು.

ಹಟ್ಟಿ ಚಿನ್ನದಗಣಿ ಪ್ರವಾಸಿ‌ ಮಂದಿರದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯಲ್ಲಿ ಟಿಯುಸಿಐ ಮುಖಂಡ ಆರ್ ಮಾನಸಯ್ಯ ಅವರು ಕಾರ್ಮಿಕರ ಸಮಸ್ಯೆಗಳು, ಸೌಲಭ್ಯಗಳ ಕುರಿತು ಸಚಿವರಿಗೆ ಮನವಿ‌ ಮಾಡಿದರು.

ಹಟ್ಟಿ‌ ಚಿನ್ನದಗಣಿ‌ ಕಾರ್ಮಿಕರ ಸಮಸ್ಯೆಗಳನ್ನು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಹಂತ-ಹಂತವಾಗಿ ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.

ನಂತರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ, ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಸಮಸ್ಯೆಗಳ ಮಾಹಿತಿ ನೀಡಿದರು.

ಅಲ್ಲದೆ ತಮ್ಮ ಅದ್ಯಕ್ಷತೆಯಲ್ಲಿ ಕಾರ್ಮಿಕ ಮುಖಂಡರು, ಹಟ್ಟಿ‌ಚಿನ್ನದ ಗಣಿ ಆಡಳಿತ ಮಂಡಳಿಯೊಂದಿಗೆ ಮುಂದಿನ ವಾರದಲ್ಲಿ ಸಭೆ ಕರೆಯಬೇಕು ಎಂದು ಮಾತನಾಡಿದರು.

ಇದರಂತೆ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಲು ಮುಂದಿನ ವಾರದಲ್ಲಿ ಅಂದರೆ ದಿನಾಂಕ 12-13 ರಂದು ಸಚಿವರೊಂದಿಗೆ ಸಭೆ ನಿಗದಿ ಮಾಡಿದರು.

ಈ ಸಂದರ್ಭದಲ್ಲಿ ಲಿಂಗಸ್ಗೂರು ಮಾಜಿ ಶಾಸಕರಾದ ಡಿ.ಎಸ್. ಹೂಲಗೇರಿ, ಲಿಂಗಸ್ಗೂರು ಸಹಾಯಕ‌ ಆಯುಕ್ತರಾದ ಬಸವರಾಜ ಕಲ್ಶಟ್ಟಿ, ಆಡಳಿತ ಮಂಡಳಿ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande