ಕೊಪ್ಪಳ, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿಯ ಖಾಲಿ ಸೀಟುಗಳ ಭರ್ತಿಗೆ ಕೌನ್ಸಲಿಂಗ್ ಮೂಲಕ ದಾಖಲಾತಿ ಮಾಡಲಾಗುತ್ತಿದೆ ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಇಟಗಿ ಆದರ್ಶ ವಿದ್ಯಾಲಯದ 2025-26ನೇ ಸಾಲಿಗೆ ಈಗಾಗಲೇ ಮೂರು ಹಂತದಲ್ಲಿ 6ನೇ ತರಗತಿಗೆ ದಾಖಲಾತಿಯನ್ನು ಮಾಡಿಕೊಳ್ಳಲಾಗಿದ್ದು, ಇನ್ನು 42 ಸೀಟುಗಳು ಖಾಲಿ ಉಳಿದಿರುತ್ತವೆ. ಈ ಖಾಲಿ ಸೀಟುಗಳ ಭರ್ತಿಗೆ 1:30 ಅನುಪಾತದಂತೆ ಮೀಸಲಾತಿವಾರು ಅರ್ಹ ವಿದ್ಯಾರ್ಥಿಗಳ ಪಟ್ಟಿಯ ಪ್ರಕಾರ (ಒಂದು ಸೀಟಿಗೆ 30 ವಿದ್ಯಾರ್ಥಿಗಳಂತೆ) ಕೌನ್ಸಲಿಂಗ್ ಮೂಲಕ ದಾಖಲಾತಿ ಮಾಡಿಕೊಳ್ಳಲು ಆಗಸ್ಟ್ 11 ಮತ್ತು ಆ. 12 ರಂದು ಸಾಮಾನ್ಯ, ಪ್ರವರ್ಗ-1 ಹಾಗೂ ಪ್ರವರ್ಗ-3ಬಿ ಅಭ್ಯರ್ಥಿಗಳಿಗೆ ಮತ್ತು ಆ. 13 ಮತ್ತು ಆ. 14 ರಂದು ಎಸ್.ಸಿ, ಎಸ್.ಟಿ, ಪ್ರವರ್ಗ-2ಎ ಹಾಗೂ ಪ್ರವರ್ಗ-2ಬಿ ಅಭ್ಯರ್ಥಿಗಳಿಗೆ ಇಟಗಿ ಆದರ್ಶ ವಿದ್ಯಾಲಯದಲ್ಲಿ ಕೌನ್ಸಲಿಂಗ್ ನಡೆಸಲಾಗುವುದು.
1:30 ಪಟ್ಟಿಯಲ್ಲಿರುವ ಅರ್ಹ ವಿದ್ಯಾರ್ಥಿಗಳು ಕೌನ್ಸಲಿಂಗ್ ದಿನದಂದು ಬೆಳಿಗ್ಗೆ 10 ಗಂಟೆಗೆ ಸಂಬಂಧಿಸಿದ ದಾಖಲಾತಿಗಳಾದ ಆಯ್ಕೆ ಪರೀಕ್ಷೆಯ ಪ್ರವೇಶ ಪತ್ರದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ ಪ್ರತಿ, ಬೇರೆ ತಾಲೂಕು ಅಥವಾ ಜಿಲ್ಲೆಯ ವಿದ್ಯಾರ್ಥಿಯಾಗಿದ್ದಲ್ಲಿ ಯಲಬುರ್ಗಾ ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಮುಂತಾದ ದಾಖಲಾತಿಗಳೊಂದಿಗೆ ಕೌನ್ಸಲಿಂಗ್‍ಗೆ ಹಾಜರಾಗಬೇಕು. 1:30 ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಆದರ್ಶ ವಿದ್ಯಾಲಯ ಇಟಗಿ, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಯಲಬುರ್ಗಾ ಇಲ್ಲಿ ಪಾಲಕರ-ವಿದ್ಯಾರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್