ವಾಹನ ಒದಗಿಸಲು ಅರ್ಹ ಸಂಸ್ಥೆಯಿಂದ ಅರ್ಜಿ ಆಹ್ವಾನ
ರಾಯಚೂರು, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಾಹನಗಳನ್ನು ಒದಗಿಸಲು ಅರ್ಹ ಸಂಸ್ಥೆಗಳಿಂದ ಒಂದು ವರ್ಷದ ಅವಧಿಗೆ ಸೇವೆ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಕಾರ್ಯಾಕ್ರಮಗಳಿಗೆ ಅವಶ್ಯಕವಾದ ಒಟ್ಟು 16 ವಾಹನಗಳು ಜಿ
ವಾಹನ ಒದಗಿಸಲು ಅರ್ಹ ಸಂಸ್ಥೆಯಿಂದ ಅರ್ಜಿ ಆಹ್ವಾನ


ರಾಯಚೂರು, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಾಹನಗಳನ್ನು ಒದಗಿಸಲು ಅರ್ಹ ಸಂಸ್ಥೆಗಳಿಂದ ಒಂದು ವರ್ಷದ ಅವಧಿಗೆ ಸೇವೆ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಕಾರ್ಯಾಕ್ರಮಗಳಿಗೆ ಅವಶ್ಯಕವಾದ ಒಟ್ಟು 16 ವಾಹನಗಳು ಜಿಲ್ಲಾ ಮಟ್ಟದ ಕಚೇರಿಗಳಿಗೆ ಹಾಗೂ ತಾಲೂಕು ಮಟ್ಟದಲ್ಲಿ ಆರ್.ಬಿ.ಎಸ್.ಕೆ. ತಂಡಗಳಿಗೆ ವಾಹನಗಳ ಬೇಕಾಗಿದ್ದು, ಆಸಕ್ತರು ಆಗಸ್ಟ್ 13ರ ಸಂಜೆ 5.30ಗಂಟೆಗೆ ಅರ್ಜಿಯನ್ನು ಇ-ಪ್ರಕ್ಯೂರ್‍ಮೆಂಟ್ ವೆಬ್‍ಸೈಟ್ https://kppp.karnataka.gov.in ನಲ್ಲಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯದ ಡಿ.ಪಿ.ಎಂ.ಯು. ವಿಭಾಗಕ್ಕೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande