ಹಾಸನ, 05 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹಾಸನ ಜಿಲ್ಲೆಯ ಸಕಲೇಶಪುರ ಪುರಸಭಾ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಎಸ್.ಎಫ್.ಸಿ ಯೋಜನೆಯ ಶೇ.24.10%, ಶೇ.7.25% ಶೇ.5% ಹಾಗೂ 2025-26ನೇ ಸಾಲಿನ ಪುರಸಭಾ ನಿಧಿ ಶೇ.24.10% ರ ಅನುದಾನದ ಪರಿಶಿಷ್ಷ ಜಾತಿ, ಪರಿಶಿಷ್ಟ ಪಂಗಡ, ಬಡಜನರ ಕಲ್ಯಾಣ ಮತ್ತು ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯ ಪಡೆಯಲು ಇಚ್ಚಿಸುವವರು ನಿಗದಿಪಡಿಸಿರುವ ದಾಖಲಾತಿಗಳೊಂದಿಗೆ ಈ ಕಚೇರಿಗೆ ಅರ್ಜಿ ಸಲ್ಲಿಸಿ, ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ. ಷರತ್ತು ಮತ್ತು ಹೆಚ್ಚಿನ ವಿವರಗಳನ್ನು ಕಚೇರಿಯ ವೇಳೆಯಲ್ಲಿ ಸಂಬಂಧಪಟ್ಟ ವಿಷಯ ನಿರ್ವಾಹಕರಿಂದ ಪಡೆಯ ಬಹುದಾಗಿದೆ.
ಸ್ವಯಂ ಉದ್ಯೋಕ್ಕಾಗಿ ಹಾಗೂ ದಿವ್ಯಾಂಗಚೇತನರಿಗೆ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ದಾಖಲೆಗಳ ವಿವರ: ಲಿಖಿತ ಅರ್ಜಿ, ಚಾಲ್ತಿ ಸಾಲಿನ ಆದಾಯ ದೃಢೀಕರಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರ,ಬಿ.ಪಿ.ಎಲ್ ಪಡಿತರ ಚೀಟಿಯ ನಕಲು,ಆಧಾರ್ ಕಾರ್ಡ್ ನಕಲು, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ವಿಕಲಚೇತರಿಗೆ ಸಂಬಂಧಿಸಿದ ಇಲಾಖೆಯಿಂದ ಪಡೆದ ವಿಕಲ ಚೇತನ ದೃಡೀಕರಣ ಪತ್ರ.
ಕಾರ್ಯಕ್ರಮದ ವಿವರ: 2025-26ನೇ ಸಾಲಿನ ಎಸ್.ಎಫ್.ಸಿ ಮತ್ತು ಪುರಸಭಾ ನಿಧಿಯ ಶೇ.24.10 ರ ಎಸ್.ಎಫ್.ಸಿ ಮತ್ತು ಟಿ.ಎಸ್.ಪಿ ಉಪಘಟಕದಡಿಯಲ್ಲಿ ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಧನ, ಬಿ.ಇ/ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ಸಹಾಯಧನ, ಪಕ್ಕಾ ಮನೆ ನಿರ್ಮಿಸಲು ಸಹಾಯಧನ, 2025-26ನೇ ಸಾಲಿನ ಎಸ್.ಎಫ್.ಸಿ ಯೋಜನೆಯ ಶೇ.7.25 ರ ಅನುದಾನದಲ್ಲಿ ನಾನಾ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಸಹಾಯ ಧನ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18-08-2025 ಆಗಿದ್ದು, ಅವಧಿ ಮೀರಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸಕಲೇಶಪುರ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa