ಆರೋಗ್ಯ ತಪಾಸಣೆ ಶಿಬಿರ, ವಿಶ್ವ ಸ್ತನ್ಯಪಾನ ಸಪ್ತಾಹ
ರಾಯಚೂರು, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ನಗರದ ಅಮರ ಖೇಡ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಜೊತೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಯಿತ
ಆರೋಗ್ಯ ತಪಾಸಣೆ ಶಿಬಿರ, ವಿಶ್ವ ಸ್ತನ್ಯಪಾನ ಸಪ್ತಾಹ


ರಾಯಚೂರು, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ನಗರದ ಅಮರ ಖೇಡ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಜೊತೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಯಿತು.

ಈ ವೇಳೆ ವೈದ್ಯಾಧಿಕಾರಿ ಡಾ. ಶ್ವೇತಾಂಬರಿ ಅವರು ಮಾತನಾಡಿ, ತಾಯಿ ಎದೆಹಾಲು ಅಮೃತಕ್ಕೆ ಸಮಾನ. ಹುಟ್ಟಿದ ಅರ್ಧ ಗಂಟೆಯೊಳಗೆ ಬರುವ ಹಳದಿ ಹಾಲು ಶಿಶುವಿಗೆ ಕುಡಿಸಬೇಕು. ತಾಯಿಯ ಎದೆಹಾಲು ಮಗುವಿಗೆ ಮೊದಲ ಲಸಿಕೆ, ಈ ಹಳದಿ ಹಾಲು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹುಟ್ಟಿದಾಗಿನಿಂದ ಹಿಡಿದು ಆರು ತಿಂಗಳವರೆಗೆ ಎದೆಹಾಲು ಮಾತ್ರ ಕುಡಿಸಬೇಕಂದು ತಿಳಿಸಿದರು.

ಈ ವೇಳೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಮಾತನಾಡಿ, ಈ ವರ್ಷದ ಘೋಷಣೆ ತಾಯಿ ಎದೆಹಾಲು ನೀಡುವದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ. ಸ್ತನ್ಯಪಾನ ತಾಯಿಯ ಮಮತೆಯ ಪ್ರತೀಕ. ಸ್ತನ್ಯಪಾನ ರಕ್ಷಣೆ ಎಲ್ಲರ ಪಾಲಿನ ಜವಬ್ದಾರಿ ಪ್ರತಿಯೊಬ್ಬ ತಾಯಿಯಲ್ಲಿ ತನ್ನ ಮಗುವಿಗೆ ಸಾಕಷ್ಟು ಹಾಲನ್ನು ಉತ್ಪಾದಿಸುವ ಸಾಮಥ್ರ್ಯ ವಿದೆ. ಎದೆಹಾಲುನ್ನುಂಡಷ್ಟು ಎದೆಹಾಲು ಉತ್ಪತ್ತಿಯಾಗುವುದು. ಮಗುವಿಗೆ ಹಾಲು ಸಾಕಾಗಲ್ಲ ಎಂಬ ಮನೋಭಾವನೆಯನ್ನು ತೊಡೆದು ಹಾಕಿ ಮಗುವಿನ ಸಮರ್ಪಕವಾದ ಪೆÇೀಷಣೆಗೆ ತಾಯಿ ತನ್ನ ಸಾಮರ್ಥ್ಯ ಅರಿತು ಎದೆಹಾಲನ್ನು ಉಣಿಸಲು ಮುಂದಾಗಬೇಕು ಎಂದರು.

ಈ ವೇಳೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಅವರು ಮಾತನಾಡಿ, ಎದೆಹಾಲು ಬರುತ್ತಿಲ್ಲವೆಂದು ಬಾಟಲಿ ಹಾಲು, ಗ್ರೈಫ್ ವಾಟರ್ ಇನ್ನಿತರ ಬೇರೆ ಏನನ್ನೂ ಕುಡಿಸಬಾರದು. ಮಗುವಿಗೆ ಎದೆಹಾಲಿನ ಜೊತೆಗೆ ಲಸಿಕೆ ಹಾಕಿಸಬೇಕು ಎಂದು ತಾಯಿಂದಿರಿಗೆ ತಿಳಿಸಿದರು.

ಇದೇ ಸಂದರ್ಭದಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಪದ್ಮಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ.ಕೆ. ಶುಶ್ರೂಷಣಾಧಿಕಾರಿ ಪಿ.ಹೆಚ್.ಸಿ.ಒ ಮಹೇಶ್ವರಿ ಆಶಾ ಕಾರ್ಯಕರ್ತೆಯರಾದ ಶೋಭಾ, ಗಂಗಮ್ಮ, ನಾಗಮ್ಮ, ನಸೀಮಾ ಬಾನು, ಜಯಮ್ಮ, ಬಾನು, ಖಾಜಾ ಸೇರಿದಂತೆ ತಾಯಂದಿರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande