ಬಾಲ್ಯವಿವಾಹ : ಜಾಗೃತಿ ಅಗತ್ಯ-ಚನ್ನಬಸಪ್ಪ ಪಾಟೀಲ್
ಬಳ್ಳಾರಿ, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಬಾಲ್ಯವಿವಾಹ ನಿಯಂತ್ರಿಸಲು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯವರಿಗೆ ಹೆಚ್ಚಿನ ಜಾಗೃತಿಯ ಅಗತ್ಯವಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಅವರು ತಿಳಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಕೇಂದ್ರ
ಬಾಲ್ಯವಿವಾಹ : ಜಾಗೃತಿ ಅಗತ್ಯ-ಚನ್ನಬಸಪ್ಪ ಪಾಟೀಲ್


ಬಳ್ಳಾರಿ, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಬಾಲ್ಯವಿವಾಹ ನಿಯಂತ್ರಿಸಲು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯವರಿಗೆ ಹೆಚ್ಚಿನ ಜಾಗೃತಿಯ ಅಗತ್ಯವಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಅವರು ತಿಳಿಸಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಕೇಂದ್ರ, ಪೋಲಿಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಕಂಟೋನ್‍ಮೆಂಟ್ ಪ್ರದೇಶದ ಗಾಲೀಬ್ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ `ಬಾಲ್ಯವಿವಾಹ, ಪೆÇೀಕ್ಸೋ ಕಾಯ್ದೆ ಮತ್ತು ಮೂಡ ನಂಬಿಕೆಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ’ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯವಿವಾಹಗಳನ್ನು ನೆರವೇರಿಸುತ್ತಿರುವ ಪುರೋಹಿತರು, ಮೌಲ್ವಿಗಳು, ಚರ್ಚ್ ಪಾದ್ರಿಗಳು ಮತ್ತು ಪೂಜಾರಿಗಳು, ಲಗ್ನ ಪತ್ರಿಕೆ ಪ್ರಿಟಿಂಗ್ ಪ್ರೆಸ್, ವಾದ್ಯವೃಂದ, ಶಾಮಿಯಾನ ಸಪ್ಲೈಯರ್, ಪೋಟೋ-ವಿಡಿಯೋಗ್ರಾಫರ್ ಸೇರಿ ಎಲ್ಲರಿಗೂ ಕಾನೂನಿನ ಕಠಿಣ ಕ್ರಮಗಳ ಅರಿವು ಮೂಡಿಸಬೇಕು. ತಪ್ಪಿದ್ದಲ್ಲಿ ಶಿಕ್ಷಿಸಬೇಕು ಎಂದರು.

ಮಕ್ಕಳ ರಕ್ಷಣಾ ಘಟಕದ ನಿಲೋಫಿಯಾ ಅವರು, ಮಕ್ಕಳಿಗೆ ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸಿ ಬಾಲ್ಯವಿವಾಹಕ್ಕೆ ಒಳಪಟ್ಟ ಬಾಲಕಿಯರು ಅನುಭವಿಸುವ ಕಷ್ಟ, ಪೆÇೀಷಕರ ಮೇಲಿನ ಕಾನೂನು ಕ್ರಮಗಳು ಹಾಗೂ ಪೆÇೀಕ್ಸೋ ಕಾಯ್ದೆ ಇನ್ನಿತರೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಮಕ್ಕಳ ಸಹಾಯವಾಣಿ ಸಿಬ್ಬಂದಿಯಾದ ಸುಶೀಲ, ಮಕ್ಕಳ ಸಹಾಯವಾಣಿ ಸಂಖ್ಯೆ-1098 ನ ಕಾರ್ಯವೈಖರಿ, ಸೇವೆಗಳು, ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ ಕುರಿತು ಮಾಹಿತಿ ನೀಡಿದರು.

ಸಿಆರ್‍ಪಿ ಶಾಹನವಾಜ್ ಅವರು, ಎಲ್ಲಾ ಮಕ್ಕಳು ಬಾಲ್ಯವಿವಾಹ ತಡೆಯಬೇಕು. ತಮ್ಮ ತಮ್ಮ ಪೋಷಕರಿಗೆ ಈ ಕುರಿತು ಅರಿವು ಮೂಡಿಸಬೇಕು. ಬಾಲ್ಯವಿಹಾಗಳ ಕುರಿತು ಮಕ್ಕಳ ಸಹಾಯವಾಣಿ ಸಂಖ್ಯೆ-1098 ಅಥವಾ ಪೊಲೀಸ್ ಸೇವೆ-112 ಗೆ ಮಾಹಿತಿ ನೀಡಬೇಕು ಎಂದರು.

ಪೊಲೀಸ್ ಇಲಾಖೆಯ ನವದುರ್ಗಿ ತಂಡದ ಪವಿತ್ರ ಅವರು, ಸೈಬರ್ ಕ್ರೈಂ ಮತ್ತು ಅಂತರ್ಜಾಲ ಸುರಕ್ಷತೆ, ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ಹಾಗೂ ಪೊಲೀಸ್ ಸಹಾಯವಾಣಿ ಸಂಖ್ಯೆ-112 ಗೆ ಕರೆ ಮಾಡಲು ತಿಳಿಸಿದರು.

ಶಾಲೆಯ ಮುಖ್ಯಗುರುಗಳಾದ ನಜೀರ್ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande