ಸಾರಿಗೆ ಮುಷ್ಕರ ; ಕರ್ತವ್ಯಕ್ಕೆ ಕೆಲವು ನೌಕರರು ಗೈರು
ವಿಜಯಪುರ, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ವಿಜಯಪುರದಲ್ಲಿ ಮುಷ್ಕರಕ್ಕೆ ಸಾರಿಗೆ ನೌಕರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವು ನೌಕರರು ಕರ್ತವ್ಯಕ್ಕೆ ಹಾಜರು ಆಗಿದ್ದಾರೆ. ಬೇರೆ ಊರುಗಳಿಂದ ರಾತ್ರಿ ಹೊರಟಿದ್ದ ಬಸ್ ಗಳು ಬಸ್ ನಿಲ್ದಾಣಕ್ಕೆ ಆಗಮಿಸುತ್
ಬಸ್


ವಿಜಯಪುರ, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ವಿಜಯಪುರದಲ್ಲಿ ಮುಷ್ಕರಕ್ಕೆ ಸಾರಿಗೆ ನೌಕರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕೆಲವು ನೌಕರರು ಕರ್ತವ್ಯಕ್ಕೆ ಹಾಜರು ಆಗಿದ್ದಾರೆ. ಬೇರೆ ಊರುಗಳಿಂದ ರಾತ್ರಿ ಹೊರಟಿದ್ದ ಬಸ್ ಗಳು ಬಸ್ ನಿಲ್ದಾಣಕ್ಕೆ ಆಗಮಿಸುತ್ತಿವೆ. ಬೇರೆ ಡಿಪೋ ಬಸ್ ಗಳು ಮಾತ್ರ ವಿಜಯಪುರ ಬಸ್ ನಿಲ್ದಾಣದಿಂದ ಹೊರಟಿವೆ.

ಮುಷ್ಕರದ ಬಗ್ಗೆ ಮಾಹಿತಿ ಇರುವ ಕಾರಣ ಬಸ್ ನಿಲ್ದಾಣಕ್ಕೆ ಜನರು ಬರುತ್ತಿಲ್ಲ. ಅಲ್ಲದೇ, ಪ್ರಯಾಣಿಕರ ಸಂಖ್ಯೆಯೂ ಕೂಡಾ ಕಡಿಮೆ ಆಗಿದೆ.‌

ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಬಳಕೆ ಕಡಿಮೆ ಇದೆ. ಹೀಗಾಗಿ ಜನರೇ ತಮ್ಮ ಸ್ವಂತ ವಾಹನಗಳ ಮೂಲಕ ನಿತ್ಯ ಕೆಲಸಕ್ಕೆ ಪ್ರಯಾಣಿಸುತ್ತಿದ್ದಾರೆ.

773 ಬಸ್ ಗಳು ನಿತ್ಯ ಜಿಲ್ಲೆಯಿಂದ ಸಂಚಾರ ಮಾಡುತ್ತವೆ. 260 ಜ‌ನ ಸಿಬ್ಬಂದಿ ಪೈಕಿ, 86 ಜನ ಮಾತ್ರ ಕರ್ತವ್ಯಕ್ಕೆ ಹಾಜರ್ ಆಗಿದ್ದಾರೆ. 131 ಬಸ್ ನಿತ್ಯ ಬೆಳಿಗ್ಗೆ ಟ್ರಿಪ್ ಗೆ ತೆರಳಬೇಕಿತ್ತು. ಈವರೆಗೆ 43 ಬಸ್ ಗಳ ಸಂಚಾರ ಮಾಡಿವೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande