ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಯತ್ನ- ಎನ್ಎಸ್ ಬೋಸರಾಜು
ರಾಯಚೂರು, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಮಾಜದಲ್ಲಿ ಎಲ್ಲ ಜಾತಿ-ಧರ್ಮ ಭಾಂದವರನ್ನು ಬೇದ ಭಾವವಿಲ್ಲದೆ ಸಮಾನವಾಗಿ‌ ಕಾಣುವ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಮಠ-ಮಾನ್ಯಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ನೆಲೆಸಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿ
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ- ಎನ್ಎಸ್ ಬೋಸರಾಜು


ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ- ಎನ್ಎಸ್ ಬೋಸರಾಜು


ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ- ಎನ್ಎಸ್ ಬೋಸರಾಜು


ರಾಯಚೂರು, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಮಾಜದಲ್ಲಿ ಎಲ್ಲ ಜಾತಿ-ಧರ್ಮ ಭಾಂದವರನ್ನು ಬೇದ ಭಾವವಿಲ್ಲದೆ ಸಮಾನವಾಗಿ‌ ಕಾಣುವ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಮಠ-ಮಾನ್ಯಗಳಿಂದ ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ನೆಲೆಸಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ತಿಳಿಸಿದರು.

ಸಿರವಾರ ತಾಲೂಕಿನ ಲಕ್ಕಂದಿನ್ನಿ ಗ್ರಾಮದಲ್ಲಿ ಕೆಕೆಆರ್ ಡಿಬಿ, ಶಾಸಕರ ಅನುದಾನದಡಿಯಲ್ಲಿ 51.20 ಲಕ್ಷ ರೂನಲ್ಲಿ ಶ್ರೀ ಶಿವಪ್ಪ ತಾತನವರ ಮಠದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎನ್ಎಸ್ ಬೋಸರಾಜು ಶಾಸಕ‌ ಹಂಪಯ್ಯ ನಾಯಕ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಲಕ್ಕಂದಿನ್ನಿ ಶ್ರೀ ಶಿವಪ್ಪ ತಾತನವರ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಮಠದ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಲಾಗುವುದು ಶ್ರೀದೇವರ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ತಿಳಿಸಿದರು.

ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಜನಪದ ಗ್ಯಾರಂಟಿ ಯೋಜನೆಗಳೊಂದಿಗೆ ಗ್ರಾಮೀಣ ಭಾಗಗಳ ರಸ್ತೆ, ಚರಂಡಿ, ಶಿಕ್ಷಣ, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿ ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

ನಂತರ ಶಾಸಕ ಹಂಪಯ್ಯ ನಾಯಕ ಅವರು ಮಾತನಾಡಿ, ವಲ್ಕಂದಿನ್ನಿ ಶ್ರೀ ಶಿವಪ್ಪ ತಾತನವರ ದೇವಸ್ಥಾನ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಲಾಗಿದೆ. ಆದಷ್ಠು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮಠದ ಭಕ್ತಿಗೆ, ಸಾರ್ವಜನಿಕರಿಗೆ ಅನುಕೂಲ‌ ಮಾಡಿಕೊಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸೂಗಪ್ಪ ಸಾಹುಕಾರ ಚುಕ್ಕಿ, ಕೆ ಶಾಂತಪ್ಪ, ಶರಣಯ್ಯ ನಾಯಕ, ಯುವ ಮುಖಂಡರಾದ ಬ್ರಿಜ್ಜೇಶ ಪಾಟೀಲ್, ಶಿವಪ್ಪ ಗೌಡ, ಚಂದ್ರು ಕಳಸದ್, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ, ತಾಪಂ ಕಾರ್ಯ ನಿರ್ವಾಹಕ‌ ಅಧಿಕಾರಿ ಶಶಿಧರ ಸ್ವಾಮಿ, ಶ್ರೀನಿವಾಸ್ ರಾವ್, ರಮೇಶ ದರ್ಶನಕರ್, ಭೂಪನಗೌಡ, ಬಸವರಾಜ ಪಾಟೀಲ್, ಪರ್ವತರಡ್ಡಿ ಗೌಡ, ವೆಂಕಟೇಶ, ಅಮರಯ್ಯ, ಅಂಜನೇಯ್ಯ, ಶೇಖರ್ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande