9ನೇ ವರ್ಷದ ಸಸ್ಯಸಂತೆ, ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ
ಕೊಪ್ಪಳ, 04 ಆಗಸ್ಟ್ (ಹಿ.ಸ.) : ಆ್ಯಂಕರ್ : ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಸಿ ಉಕ್ಕುಂದ ಅವರು ತಿಳಿಸಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿ
9ನೇ ವರ್ಷದ ಸಸ್ಯಸಂತೆ, ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ


ಕೊಪ್ಪಳ, 04 ಆಗಸ್ಟ್ (ಹಿ.ಸ.) :

ಆ್ಯಂಕರ್ : ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಸಿ ಉಕ್ಕುಂದ ಅವರು ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಲ್ಲದೇ ಸರ್ವತೋಮುಖ ಅಭಿವೃದ್ಧಿಗಾಗಿ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2025 ಎನ್ನುವ ಕಾರ್ಯಕ್ರಮವನ್ನು ಆಗಸ್ಟ್ 15 ರಿಂದ ಆ. 20ರ ವರೆಗೆ ಆರು ದಿನಗಳ ಕಾಲ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದಲ್ಲಿ ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ಒಂದೇ ಸೂರಿನಡಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ತೆಂಗು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ತಳಿಗಳಲ್ಲದೇ ಅನೇಕ ವಿಧದ ಕಸಿ-ಸಸಿಗಳು, ಅಲಂಕಾರಿಕ ಸಸ್ಯಗಳು, ಹೂವಿನ, ತರಕಾರಿ, ಔಷದೀಯ, ಸಾಂಬಾರು ಸಸ್ಯಗಳು, ಇದಲ್ಲದೇ ಅಪ್ರಧಾನ ಹಣ್ಣಗಳಾದ ನೇರಳೆ, ಸೀತಾಫಲ, ಬೀಜರಹಿತ ಸೀಬೆ, ಡ್ರ್ಯಾಗನ್ ಹಣ್ಣು ಹಾಗೂ ಈ ವರ್ಷದ ಸಸ್ಯಸಂತೆಯಲ್ಲಿ ಸೇಬು (ಆ್ಯಪಲ್) ತಳಿ ಕಸಿ ಸಿಸಿಗಳು ಹಾಗೂ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ತಳಿ ಮತ್ತು ಜಗತ್ತಿನ ದುಬಾರಿ ನಟ್ ಮೆಕಡೋನಿಯಾ ಕಸಿ ಸಸಿಗಳು ಹಾಗೂ ಮುಂತಾದ ಹೊಸ ಬಗೆಯ ಹಣ್ಣಿನ, ಹೂವಿನ ಸ್ವದೇಶಿ ಮತ್ತು ವಿದೇಶಿ ಸಸಿಗಳನ್ನು ಇಲಾಖೆಯ ಯೋಗ್ಯ ದರದಲ್ಲಿ ಪೂರೈಸುವುದು ಹಾಗೂ ಕೆಲವು ಪ್ರಮುಖ ಉದ್ದೇಶಗಳನ್ನು ರೈತರಿಗಾರಿ ಈ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಸ್ಯ ಸಂತೆಯ ಪ್ರಮುಖ ಉದ್ದೇಶಗಳು: ತೋಟಗಾರಿಕೆಯಲ್ಲಿ ಹಲಸು ಬೆಳೆಯ ಕುರಿತು ಪ್ಲೋರಜಾ ಕಂಪನಿಯೊಂದಿಗೆ ಒಪ್ಪಂದ ಕೃಷಿ ಕುರಿತು ಮಾಹಿತಿ. ರೈತರಿಗೆ ತೋಟಗಾರಿಕೆಯಲ್ಲಿ ಹೊಸ ಬಗೆಯ ಹಣ್ಣು, ಹೂ, ತರಕಾರಿ ಹಾಗೂ ಸಾಂಬರ್ ಬೆಳೆಗಳನ್ನು ಬೆಳೆಯುವ ಬಗ್ಗೆ ಹಾಗೂ ಮಾರುಕಟ್ಟೆ ಕುರಿತು ಮಾಹಿತಿ. ತೋಟಗಾರಿಕೆಯಲ್ಲಿ ಸಾವಯವ ಪರಿರ್ವತನೆ ಸಾವಯವ ದೃಡಿಕರಣ ಪ್ರಮಾಣ ಪತ್ರ ಕುರಿತು ಮಾಹಿತಿ ಹಾಗೂ ಸಾವಯವ ಬೆಳೆಗಳ ಒಪ್ಪಂದ ಕುರಿತು ಮಾಹಿತಿ. ಇಲಾಖೆಯಲ್ಲಿ ಅನುಷ್ಠಾನಗೊಳ್ಳುವ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ಹಾಗೂ ವಿವಿಧಅಲಂಕಾರಿಕ ಬಣ್ಣ ಬಣ್ಣದ ಹೂವಿನ ಸಿಸಿಗಳು ಹಾಗೂ ಕುಂಡಲಗಳು ಹಾಗೂ ವಿವಿಧ ಪರಿಕರಗಳ ಮಾರಾಟ. ಇಲಾಖೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಗುಣ ಮಟ್ಟದ ಸಸಿಗಳು, ಎರೆಹುಳು ಗೊಬ್ಬರ, ಎರೆಜಲ ಹಾಗೂ ಜೈವಿಕಗೊಬ್ಬರ, ನೀಮಾಸ್ತ್ರ, ಜೀವಾಮೃತ, ಗೋಕೃಪಾಮೃತ ಮಾರಾಟ ವಿವಿಧ ಬ್ಯಾಂಕ್ ಗಳಿಂದ ರೈತರಿಗೆದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ.

ಇದಲ್ಲದೇ ಸಮಗ್ರ ಖುಷ್ಕಿ ಒಣ ಬೇಸಾಯ, ಅಪ್ರಧಾನ ಹಣ್ಣುಗಳು, ವಿದೇಶಿ ಹಣ್ಣುಗಳು, ಅಲ್ಪಾವಧಿ, ಮಧ್ಯಾಮವಧಿ ಮತ್ತು ದೀರ್ಘಾವಧಿ ತೋಟಗಾರಿಕೆ ಬೆಳೆಗಳು ಹಾಗೂ ಸಮುದಾಯ ತೋಟಗಾರಿಕೆಯಿಂದ ಆಗುವ ಲಾಭಗಳ ಮಾಹಿತಿ. ನೀರಿನ ಮಿತವಾದ ಬಳಕೆಗೆ ಹನಿ ನೀರಾವರಿ ಮತ್ತು ರಸಾವರಿ ತಾಂತ್ರೀಕತೆ, ಇಸ್ರೇಲ್ ಮಾದರಿ ತಾಂತ್ರಿಕತೆ ಹಾಗೂ ತೋಟಗಾರಿಕೆಯಲ್ಲಿ ನವೀನ ತಾಂತ್ರಿಕತೆಗಳ ಬಗ್ಗೆ ಮಾಹಿತಿ. ತೋಟಗಾರಿಕೆ ಆಧಾರಿತ ಉಪ ಕಸುಬುಗಳಾದ ಜೇನು ಸಾಕಾಣಿಕೆ, ಅಣಬೆ ಬೇಸಾಯ, ಮೌಲ್ಯವರ್ಧನೆ ಬಗ್ಗೆ ಮಾಹಿತಿ. ತೋಟಗಾರಿಕೆ ಬೆಳೆ ವಿಮಾ ಬಗ್ಗೆ ಜಾಗೃತಿ. ಕೈ ತೋಟ, ತಾರಸಿ ತೋಟ, ವರ್ಟಿಕಲ್ ತೋಟ ಬಹುಮಹಡಿ ಪದ್ದತಿಯಲ್ಲಿ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷತೆ. ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಮಾಹಿತಿ ನೀಡಲು ಉದ್ದೇಶಿಸಿದ್ದು, ಕೊಪ್ಪಳ ಜಿಲ್ಲೆಯ ಸಮಸ್ತ ರೈತರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ತೋಟಗಾರಿಕೆ ಇಲಾಖೆ, ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾ.ವ.) ಕೊಪ್ಪಳ ಮೋ.ಸ. 9483284926, 8660412770 ಹಾಗೂ ತೋಟಗಾರಿಕೆ ಇಲಾಖೆಯ ಆಯಾ ತಾಲ್ಲೂಕು ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande