ರಾಜ್ಯದಲ್ಲಿ ಗುಣಮಟ್ಟವಲ್ಲದ ಔಷಧಗಳ ಜಪ್ತಿ : ಗುಂಡೂರಾವ್
ಬೆಂಗಳೂರು, 04 ಆಗಸ್ಟ್ (ಹಿ.ಸ.) : ಆ್ಯಂಕರ್ : ಜುಲೈ ತಿಂಗಳಲ್ಲಿ ರಾಜ್ಯದಾದ್ಯಂತ 3,489 ಆಹಾರ ಹಾಗೂ ಔಷಧೀಯ ಮಾದರಿಗಳನ್ನು ಪರಿಶೀಲನೆಗೆ ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 17 ಅಸುರಕ್ಷಿತವಾಗಿದ್ದು, 18 ಮಾದರಿಗಳು ಕಳೆಗುಣಮಟ್ಟದವು ಎಂದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ
ರಾಜ್ಯದಲ್ಲಿ ಗುಣಮಟ್ಟವಲ್ಲದ ಔಷಧಗಳ ಜಪ್ತಿ : ಗುಂಡೂರಾವ್


ಬೆಂಗಳೂರು, 04 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜುಲೈ ತಿಂಗಳಲ್ಲಿ ರಾಜ್ಯದಾದ್ಯಂತ 3,489 ಆಹಾರ ಹಾಗೂ ಔಷಧೀಯ ಮಾದರಿಗಳನ್ನು ಪರಿಶೀಲನೆಗೆ ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 17 ಅಸುರಕ್ಷಿತವಾಗಿದ್ದು, 18 ಮಾದರಿಗಳು ಕಳೆಗುಣಮಟ್ಟದವು ಎಂದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕುರಿತು ಬೀದಿ ಬದಿ ವ್ಯಾಪಾರ, ಬಸ್ ನಿಲ್ದಾಣ, ಅಂಗನವಾಡಿ, ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿ ನೋಟಿಸ್ ಹಾಗೂ ದಂಡ ವಿಧಿಸಲಾಗಿದೆ ಎಂದರು.

ಪ್ರತಿಷ್ಠಿತ ಹೋಟೆಲ್‌ನ 6 ಕಬಾಬ್ ಮಾದರಿಗಳು ಕೃತಕ ಬಣ್ಣಗಳಿಂದ ಅಸುರಕ್ಷಿತವೆಂದು ಪತ್ತೆಯಾಗಿದೆ. ಹಾಲು, ಕುಡಿಯುವ ನೀರು ಸೇರಿದಂತೆ ಹಲವಾರು ಮಾದರಿಗಳನ್ನು ಪರಿಶೀಲನೆಗೆ ಲ್ಯಾಬ್‌ಗೆ ಕಳುಹಿಸಲಾಗಿದೆ. ಆಗಸ್ಟ್‌ನಲ್ಲಿ ವಿಶೇಷ ತಪಾಸಣಾ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆಯುಷ್ ಔಷಧ ಪ್ರಯೋಗಾಲಯವನ್ನು ಆಹಾರ ಮತ್ತು ಔಷಧ ಆಡಳಿತ ಇಲಾಖೆಗೆ ವಿಲೀನಗೊಳಿಸಲಾಗಿದೆ. ಜುಲೈನಲ್ಲಿ 1,433 ಔಷಧ ಮಾದರಿಗಳ ಪರಿಶೀಲನೆಯಿಂದ 59 ಮಾದರಿಗಳು ಕಳಪೆ ಗುಣಮಟ್ಟದವೆಂದು ತೀರ್ಮಾನಿಸಲಾಗಿದೆ. ₹40.48 ಲಕ್ಷ ಮೌಲ್ಯದ ಔಷಧ ಜಪ್ತಿ ಮಾಡಲಾಗಿದೆ.

ಆನ್‌ಲೈನ್ ಮೂಲಕ ಪರವಾನಗಿ, ಪ್ರಮಾಣ ಪತ್ರ ನೀಡುವ ವ್ಯವಸ್ಥೆ ವಿಸ್ತರಣೆಯಲ್ಲಿದ್ದು, 30 ದಿನಗಳೊಳಗಿನ ಔಷಧ ಹಿಂಪಡೆಯುವ ಗಡಿಯನ್ನು ಇನ್ನು ಮುಂದೆ 2 ದಿನಕ್ಕೆ ಇಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande