ಹಿಸೋರ್, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : ನೂತನ ತರಬೇತುದಾರ ಖಾಲಿದ್ ಜಮಿಲ್ ನೇತೃತ್ವದಲ್ಲಿ ಭಾರತ ಪುರುಷರ ಫುಟ್ಬಾಲ್ ತಂಡವು 2025ರ ಸಿಎಎಫ್ಎ ನೇಷನ್ಸ್ ಕಪ್ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ತಜಿಕಿಸ್ತಾನ್ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದೆ.
ಭಾರತ ಪರ ಅನ್ವರ್ ಅಲಿ (5ನೇ ನಿಮಿಷ) ಹಾಗೂ ಸಂದೇಶ್ ಜಿಂಗನ್ (33ನೇ ನಿಮಿಷ) ಗೋಲು ಗಳಿಸಿದರು. ಆತಿಥೇಯ ತಂಡ ಪರ ಶಹ್ರೋಮ್ ಸಮೀವ್ ಏಕೈಕ ಗೋಲು (43ನೇ ನಿಮಿಷ) ದಾಖಲಿಸಿದರು.
ಸುಮಾರು ಎರಡು ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಇದು ಭಾರತದ ಮೊದಲ ಜಯ. 2023ರ ನವೆಂಬರ್‌ನಲ್ಲಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್ ವಿರುದ್ಧ ಭಾರತ ಗೆದ್ದಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa