ಮುಂಬಯಿ, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಧುಲೆ–ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ನಮಲ್ಗಾಂವ್ ಫಾಟಾ ಫ್ಲೈಓವರ್ ಬಳಿ ಶನಿವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ವೇಗವಾಗಿ ಬಂದ ಕಂಟೇನರ್ ಪಾದಚಾರಿಗಳ ಮೇಲೆ ಹರಿದು ಆರು ಜನರು ಮೃತಪಟ್ಟಿದ್ದಾರೆ.
ಪೆಂಡ್‌ಗಾಂವ್ ಕಡೆ ದೇವದರ್ಶನಕ್ಕೆ ತೆರಳುತ್ತಿದ್ದವರ ಮೇಲೆ ಕಂಟೇನರ್ ಹರಿದ ಪರಿಣಾಮ, ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಮೃತರನ್ನು ವಿಶಾಲ್ ಶ್ರೀಕಿಶನ್ ಕಾಕಡೆ, ಅಮೋಲ್ ನಾಮ್ದೇವ್ ಗರ್ಜೆ, ಆಕಾಶ್ ಕೋಲ್ಸೆ, ಪವನ್ ಜಗ್ತಾಪ್, ಕಿಶೋರ್ ಟೋರ್ ಎಂದು ಗುರುತಿಸಲಾಗಿದೆ.
ಅಪಘಾತದ ನಂತರ ಪರಾರಿಯಾಗಿದ್ದ ಕಂಟೇನರ್ ಚಾಲಕನನ್ನು ಬೀಡ್ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa