ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಮತ್ತೊಬ್ಬ ಶಿಕ್ಷಣ ರಾಯಭಾರಿ ಹತ್ಯೆ
ಬಿಜಾಪುರ, 30 ಆಗಸ್ಟ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲೀಯರು ಮತ್ತೊಬ್ಬ ಶಿಕ್ಷಾದೂತ ಕಲ್ಲು ತಾಟಿ ಅವರನ್ನು ಹತ್ಯೆ ಮಾಡಿದ್ದಾರೆ. ಗಂಗಲೂರು ಪ್ರದೇಶದ ನೇಂದ್ರದಲ್ಲಿ ನಿಯೋಜಿತರಾಗಿದ್ದ ಅವರು ಶುಕ್ರವಾರ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗುವಾಗ ನಕ್ಸಲರು ಅಪಹರಿಸಿ, ತಡರಾ
ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಮತ್ತೊಬ್ಬ ಶಿಕ್ಷಣ ರಾಯಭಾರಿ ಹತ್ಯೆ


ಬಿಜಾಪುರ, 30 ಆಗಸ್ಟ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲೀಯರು ಮತ್ತೊಬ್ಬ ಶಿಕ್ಷಾದೂತ ಕಲ್ಲು ತಾಟಿ ಅವರನ್ನು ಹತ್ಯೆ ಮಾಡಿದ್ದಾರೆ.

ಗಂಗಲೂರು ಪ್ರದೇಶದ ನೇಂದ್ರದಲ್ಲಿ ನಿಯೋಜಿತರಾಗಿದ್ದ ಅವರು ಶುಕ್ರವಾರ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗುವಾಗ ನಕ್ಸಲರು ಅಪಹರಿಸಿ, ತಡರಾತ್ರಿ ಕೊಲೆಗೈದಿದ್ದಾರೆ. ಮೃತರು ತೋಡ್ಕಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

ಇದಕ್ಕೂ ಮೊದಲು, ಆಗಸ್ಟ್ 27ರಂದು ಸುಕ್ಮಾ ಜಿಲ್ಲೆಯ ಸಿಲ್ಗರ್ ಪ್ರದೇಶದಲ್ಲಿ ಶಿಕ್ಷಾದೂತ ಲಕ್ಷ್ಮಣ್ ಬಾರ್ಸೆ ಅವರನ್ನು ನಕ್ಸಲರು ಹತ್ಯೆ ಮಾಡಿದ್ದರು.

ಶಾಲೆಗಳು ಪುನರಾರಂಭವಾದ ಬಳಿಕ ಬಿಜಾಪುರ ಜಿಲ್ಲೆಯಲ್ಲಿ ಈಗಾಗಲೇ 6 ಶಿಕ್ಷಾದೂತರನ್ನು ಹಾಗೂ ಸುಕ್ಮಾ ಜಿಲ್ಲೆಯಲ್ಲಿ 5 ಶಿಕ್ಷಾದೂತರನ್ನು ನಕ್ಸಲರು ಕೊಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande