ನವದೆಹಲಿ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಹತ್ತು ತಿಂಗಳ ನಂತರ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಮಾತುಕತೆ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆ ಹಾಗೂ ನೇರ ವಿಮಾನಯಾನ ಸೇವೆಗಳು ಪುನರಾರಂಭವಾಗಿರುವುದನ್ನು ಸ್ವಾಗತಿಸಿದ್ದು. ಭಾರತ-ಚೀನಾ ಸಂಬಂಧಗಳು ನಂಬಿಕೆ, ಗೌರವ ಮತ್ತು ಸೂಕ್ಷ್ಮತೆ ಆಧಾರಿತವಾಗಿರಬೇಕು ಎಂದಿದ್ದಾರೆ.
2.8 ಶತಕೋಟಿ ಜನರ ಹಿತಾಸಕ್ತಿ ಈ ಸಹಕಾರದಲ್ಲಿ ಸೇರಿದೆ ಎಂದು ಹೇಳಿದ್ದು, ಎಸ್‌ಸಿಒ ಶೃಂಗಸಭೆಗೆ ಆಹ್ವಾನ ನೀಡಿದಕ್ಕಾಗಿ ಚೀನಾವನ್ನು ಅಭಿನಂದಿಸಿದರು.
ಪ್ರಧಾನಿ ಮೋದಿ ಏಳು ವರ್ಷಗಳ ನಂತರ ಚೀನಾ ಪ್ರವಾಸ ಕೈಗೊಂಡಿದ್ದು, ಶೃಂಗಸಭೆಯಲ್ಲಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನೂ ಭೇಟಿಯಾಗಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa