ಕೋಲಾರ, ೦೩ ಆಗಸ್ಟ್ (ಹಿ.ಸ) :
ಆ್ಯಂಕರ್ : ಸಸ್ಯ ತಳಿ ಹಾಗೂ ರೈತರ ಹಕ್ಕುಗಳ ರಕ್ಷಣೆ ಕಾಯ್ದೆ- ೨೦೦೧ರಡಿ ರೈತರು ತಮ್ಮ ಪೂರ್ವಜರ ಕಾಲದಿಂದಲೂ ಉಳಿಸಿಕೊಂಡು ಬಂದಿರುವ ವಿವಿಧ ಕೃಷಿ, ತೋಟಗಾರಿಕಾ ತಳಿಗಳಿಗೆ ರಕ್ಷಣೆ ಮಾಡಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಅನುವಂಶಿಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕ ಡಾ. ಸುರೇಶ್ ಪಿ.ಜಿ ತಿಳಿಸಿದರು.
ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿಯ ಚಿಟ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು. ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಅಂತಿಮ ವರ್ಷದ ಬಿಎಸ್ಸಿ(ಆನ್ಸ್) ಕೃಷಿ ವಿಧ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಬೀಜೋಪಚಾರ ಮತ್ತು ಹೊಸ ತಳಿಗಳ ಪರಿಚಯ ಮಾಡಿಕೊಟ್ಟು ಮಾತನಾಡಿದರು.
ರೈತರು ಆಧುನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕಗೊಳಿಸಿಕೊಳ್ಳಬೇಕು ಎಂದ ಅವರು, ಇದರ ನಡುವೆ ಪಾರಂಪರಿಕ ತಳಿಗಳನ್ನು ಉಳಿಸಿಕೊಳ್ಳಲು ರೈತರಿಗೆ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ ಎಂದರು.
ಬೀಜ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಗಂಗರಾಜು ಎನ್ ಮಾತನಾಡಿ, ಕೃಷಿಯಲ್ಲಿ ಹೆಚ್ಚಿನ ಫಸಲು,ಲಾಭ ಗಳಿಸಿಕೊಳ್ಳಲು ಬಿಜೋಪಚಾರ ಅತಿ ಮುಖ್ಯವಾಗಿದೆ, ಬೀಜಗಳನ್ನು ಸೂಕ್ತವಾಗಿ ಉಪಚರಿಸಿ ಬಿತ್ತನೆ ಮಾಡುವುದರಿಂದ ಸಸಿಗಳು ಮೊಳಕೆಯೊಡೆಯುವ ಪ್ರಮಾಣ ಹೆಚ್ಚುತ್ತದೆ ಎಂದು ತಿಳಿಸಿ, ಬೀಜೋಪಚಾರದ ಕುರಿತು ಸಲಹೆ ಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಸ್ತುತ ೨೦೨೩-೨೦೨೫ನೇ ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿಡುಗಡೆ ಮಾಡಲಾದ ಹೊಸ ತಳಿಗಳ ಬಗ್ಗೆ ಪರಿಚಯ ಮಾಡಲಾಯಿತು. ಮತ್ತು ಬೀಜೋಪಚಾರ ಎಂದರೇನು, ಬೀಜೋಪಚಾರ ಮಾಡುವುದು ಹೇಗೆ, ಬೀಜೋಪಚಾರದಿಂದ ಆಗುವ ಅನುಕೂಲಗಳೇನು ಎಂದು ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ತೊಟ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೌಡರೆಡ್ಡಿ ಮಾತನಾಡಿ, ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಅಂತಿಮ ವರ್ಷದ ಬಿಎಸ್ಸಿ(ಆನ್ಸ್) ಕೃಷಿ ವಿಧ್ಯಾರ್ಥಿಗಳುಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಿಂದ ಗ್ರಾಮದ ರೈತರಿಗೆ ಕೃಷಿಯಲ್ಲಿ ಆಧುನಿಕತೆ ಅಳವಡಿಕೆಗೆ ಅರಿವು ಸಿಕ್ಕಿದೆ, ವಿದ್ಯಾರ್ಥಿಗಳು ಸಮಗ್ರ ಕೃಷಿಯ ಅನೇಕ ತಾಂತ್ರಿಕತೆಗಳನ್ನು ರೈತರಿಗೆ ತಿಳಿಸಿಕೊಟ್ಟಿದ್ದು, ಚಿಟ್ನಹಳ್ಳಿ ಗ್ರಾಮಸ್ಥರ ಪರವಾಗಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಆಂಜನಪ್ಪ, ರೈತರಾದ ಮುನಿವೆಂಕಟರೆಡ್ಡಿ, ನಾಗರಾಜ್, ಪುರುಷೋತ್ತಮ್ ಹಾಗೂ ವಿದ್ಯಾರ್ಥಿಗಳಾದ ಸೋಹನ್, ಸೃಜನ್, ಸಿದ್ದುಬಾ, ಶ್ರೀ ವಿಷ್ಣುತೇಜ್, ಸುಹಾನ್, ಸುನಿಲ್ ಕುಮಾರ್, ಸನತ್ ಕುಮಾರ್, ಶ್ರೇಯಾ, ಸ್ಪೂರ್ತಿ, ಸೋನುಪ್ರಿಯ, ಶ್ವೇತಾ ಶಾಂತಲಾ, ಶ್ವೇತಾ ಎನ್ ಆರ್, ಸ್ಮಿತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚಿತ್ರ ;ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿಯ ಚಿಟ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿಎಸ್ಸಿ(ಆನ್ಸ್) ಕೃಷಿ ವಿಧ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ೨೦೨೫-೨೬ ಶಿಬಿರದಡಿ ಬೀಜೋಪಚಾರ ಮತ್ತು ಹೊಸ ತಳಿಗಳ ಪರಿಚಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್