ವಿಜಯಪುರ, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತ ಮೆಕ್ಕಳಕಿ ಆದೇಶದ ಮೇರೆಗೆ ಮಹಾನಗರ ಪಾಲಿಕೆ ಅರೋಗ್ಯ ವಿಭಾಗ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಿಡಾಡಿ ದನಗಳನ್ನು ಹಿಡಿದು ಗೋಶಾಲೆ ಗೆ ಕಳಿಸಿದ್ದರು. ನಗರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಹಾಗೂ ಗಾಂಧಿ ಚೌಕ್, ತರಕಾರಿ ಮಾರುಕಟ್ಟೆ, ಬಾರಾ ಕಮನ್ ಏರಿಯಾದಲ್ಲಿ ತಿರುಗಾಡುತ್ತಿದ್ದ ಸುಮಾರು 12 ದನಗಳನ್ನು ವಶಕ್ಕೆ ಪಡೆದು ಗೋಶಾಲೆಗೆ ಸಾಗಿಸಲಾಯಿತು. ಇನ್ನು ದನಗಳ ಮಾಲೀಕರು ಯಾರಾದರೂ ಪಾಲಿಕೆ ಕಾರ್ಯಕ್ಕೆ ಅಡ್ಡಿ ಪಡಿಸಿದ್ದಲ್ಲಿ ಅವರ ಮೇಲೆ ಸೂಕ್ತ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದದು ಎಂದು ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande