ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ ; ಬಿಜೆಪಿಗೆ ಮುಜುಗರವಿಲ್ಲ-ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, 03 ಆಗಸ್ಟ್ (ಹಿ.ಸ.) : ಆ್ಯಂಕರ್ : ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಬಿಜೆಪಿಗೆ ಮುಜುಗರ ಎಂಬ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಪ್ರಕರಣದ ತೀರ್ಪುನಿಂದ ಬಿಜೆಪಿಗೆ ಮುಜುಗರವಿಲ್ಲ ಎಂದಿದ್ದಾರೆ. ತಪ್ಪು ಮ
Joshi


ಹುಬ್ಬಳ್ಳಿ, 03 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಬಿಜೆಪಿಗೆ ಮುಜುಗರ ಎಂಬ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಪ್ರಕರಣದ ತೀರ್ಪುನಿಂದ ಬಿಜೆಪಿಗೆ ಮುಜುಗರವಿಲ್ಲ ಎಂದಿದ್ದಾರೆ.

ತಪ್ಪು ಮಾಡಿದವರಿಗೆ ಶಿಕ್ಷೆಯಾಗಿದ್ದು, ನಮ್ಮ ಪಕ್ಷದ ನೇತೃತ್ವದಲ್ಲಿರುವ ಎನ್‌ಡಿಎಗೆ ಇದರಿಂದ ಮುಜುಗರ ಏಕೆ ಆಗಬೇಕು? ಕಾಂಗ್ರೆಸ್ ನಾಯಕರೇ ಅಪರಾಧಿಗಳ ಜೊತೆ ಕಾಣಿಸಿಕೊಂಡಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಹಾಗೂ ಯಾಸಿನ್ ಮಲ್ಲಿಕ್ ಜೊತೆ ರಾಹುಲ್ ಗಾಂಧಿಯ ಫೋಟೋಗಳಿವೆ, ಎಂದರು.

ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಇದ್ದರೂ ಅವರದು ಸ್ವತಂತ್ರ ಪಕ್ಷ, ಬಿಜೆಪಿ ಅವರ ತಪ್ಪುಗಳನ್ನು ಮೆಚ್ಚಿಲ್ಲ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande