ರಾಯಚೂರು, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರಸ್ತುತ ಶೈಕ್ಷಣಿಕ ವರ್ಷ 2025-26 ನೇ ಸಾಲಿಗೆ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಷಯದ ತರಗತಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.
ರಾಯಚೂರು ಜಿಲ್ಲೆಯ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಆಗಸ್ಟ್ 10ರ ಬುಧವಾರ ಸಂಜೆ 4.30 ರೊಳಗೆ ವಿದ್ಯಾಲಯಕ್ಕೆ ಬಂದು ಪ್ರವೇಶ ಪಡೆಯಬಹುದು. ಪ್ರವೇಶಕ್ಕೆ ಯಾವುದೇ ಶುಲ್ಕ ಇರುವದಿಲ್ಲ. ವಿದ್ಯಾಲಯಕ್ಕೆ ಬರುವಾಗ ವಿದ್ಯಾರ್ಥಿಗಳು 10ನೇ ತರಗತಿಯ ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ವಿದ್ಯಾರ್ಥಿಯ ಪೋಟೊಗಳು ತೆಗೆದುಕೊಂಡು ಬಂದು ಪ್ರವೇಶ ಪಡೆಯಲು ತಿಳಿಸಲಾಗಿದೆ. ಅಥವ https://docs.google.com/forms/d/e/1FAIpQLSe3FxTplR_g9sHWaarhwdY6d2PUQOVM9nHqS2WKud4B8P72RA/viewform?usp=header ಲಿಂಕ್ ಬಳಸಿ ಆನ್‌ಲೈನದಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಜವಾಹರ ನವೋದಯ ವಿದ್ಯಾಲಯ ಮುದಗಲ್, ಲಿಂಗಸೂರ ತಾಲೂಕು, ರಾಯಚೂರ ಜಿಲ್ಲೆ ಇವರ ಮೊಬೈಲ್ 7204109046 / 9703473495 ಗೆ ಸಂಪರ್ಕಿಸಬಹುದು. ಆಯ್ಕೆ ಪ್ರಕ್ರಿಯೆಯು 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನಡೆಯುತ್ತಿದೆ ಎಂದು ಜವಾಹರ ನವೋದಯ ವಿದ್ಯಾಲಯದ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್