ಹುಚ್ಚು ನಾಯಿ ಅಟ್ಟಹಾಸ : ಗದಗದ ರೆಹಮತ್ ನಗರದಲ್ಲಿ ಮಗು ಗಂಭೀರ ಗಾಯ, ಜನರಲ್ಲಿ ಭೀತಿ
ಗದಗ, 03 ಆಗಸ್ಟ್ (ಹಿ.ಸ.) : ಆ್ಯಂಕರ್ : ಗದಗ ನಗರದ ರೆಹಮತ್ ಬಡಾವಣೆಯಲ್ಲಿ ಹುಚ್ಚು ನಾಯಿಯ ಅಟ್ಟಹಾಸಕ್ಕೆ 3 ವರ್ಷದ ಮಗು ತೀವ್ರ ಗಾಯಗೊಂಡಿರುವ ಘಟನೆಜನರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಕಾನತೋಟ್ ಸೇರಿದಂತೆ ಹಲವು ಭಾಗಗಳಲ್ಲಿ ಈ ಹುಚ್ಚು ನಾಯಿ ದಾಳಿ ಮಾಡುತ್ತಿದ್ದರೂ, ನಗರಸಭೆ ನಿರ್ಲಕ್ಷ್ಯ ಮೆರೆ
ಪೋಟೋ


ಗದಗ, 03 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗದಗ ನಗರದ ರೆಹಮತ್ ಬಡಾವಣೆಯಲ್ಲಿ ಹುಚ್ಚು ನಾಯಿಯ ಅಟ್ಟಹಾಸಕ್ಕೆ 3 ವರ್ಷದ ಮಗು ತೀವ್ರ ಗಾಯಗೊಂಡಿರುವ ಘಟನೆಜನರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಕಾನತೋಟ್ ಸೇರಿದಂತೆ ಹಲವು ಭಾಗಗಳಲ್ಲಿ ಈ ಹುಚ್ಚು ನಾಯಿ ದಾಳಿ ಮಾಡುತ್ತಿದ್ದರೂ, ನಗರಸಭೆ ನಿರ್ಲಕ್ಷ್ಯ ಮೆರೆದಿರುವುದಕ್ಕೆ ಸಾರ್ವಜನಿಕ ಆಕ್ರೋಶ ಮೂಡಿದೆ.

ಮನೆ ಮುಂದೆ ಆಟವಾಡುತ್ತಿದ್ದ ಅದ್ವಿಕ್ ಬೂದಿಹಾಳ ಎಂಬ 3 ವರ್ಷದ ಬಾಲಕನ ಮೇಲೆ ನಾಯಿ ಅಟ್ಟಹಾಸ ಮೆರೆದಿದೆ. ತಾಯಿ ಸಿಲಿಂಡರ್ ತರಲು ಮನೆಯೊಳಗೆ ಹೋಗಿದ್ದಾಗ, ಮಗುವನ್ನು ನಾಯಿ ಕುತ್ತಿಗೆ, ಎದೆ ಹಾಗೂ ಕಾಲುಗಳಿಗೆ ಕಚ್ಚಿ ಗಾಯಗೊಳಿಸಿದೆ. ಮಗುವಿನ ಕೂಗಾಟ ಕೇಳಿ ತಾಯಿ ಹಾಗೂ ನೆರೆಹೊರೆಯವರು ಓಡಿ ಬಂದರೂ ನಾಯಿ ಪರಾರಿಯಾಗಿದೆ. ರಕ್ತಸಿಕ್ತವಾಗಿ ನರಳುತ್ತಿದ್ದ ಮಗುವಿಗೆ ತಕ್ಷಣ ಚಿಕಿತ್ಸೆ ನೀಡಲು ಗದಗ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ಘಟನೆ ಹಿನ್ನೆಲೆ ಸ್ಥಳೀಯ ಮಹಿಳೆಯರು ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಬೀದಿ ನಾಯಿಗಳ ಹಾವಳಿಗೆ ತಡೆಯಿಲ್ಲದ ಸ್ಥಿತಿಯಲ್ಲಿ ಮಕ್ಕಳು ಮನೆ ಬಿಟ್ಟು ಆಟವಾಡಲು ಕೂಡ ಭಯಪಡುವಂತಾಗಿದೆ. ಕಾನತೋಟ್ ಹಾಗೂ ರೆಹಮತ್ ನಗರದಲ್ಲಿ ಕಳೆದ ಎರಡು ದಿನಗಳಿಂದ ಈ ಹುಚ್ಚು ನಾಯಿ ಅಟ್ಟಹಾಸ ತೋರುತ್ತಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಹಲವಾರು ಜನರು ನಾಯಿ ದಾಳಿಗೆ ಒಳಗಾದರೂ ಅಧಿಕಾರಿಗಳಿಂದ ಯಾವುದೇ ಕ್ರಮವಾಗಿಲ್ಲವೆಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಎಲ್ಲಿ ನೋಡಿದರೂ ಶ್ವಾನದ ಭೀತಿ ಮನೆ ಮಾಡಿದ್ದು, ಯಾವಾಗ ಯಾರ ಮೇಲೆ ದಾಳಿ ಮಾಡುತ್ತೋ ಎಂಬ ಅಂಜಿಕೆಯಲ್ಲಿ ಜೀವನ ನಡೆಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಹುಚ್ಚು ನಾಯಿಗಳನ್ನು ಸೆರೆ ಹಿಡಿಯಲು ಒತ್ತಾಯ ಮಾಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande