ವಿಜಯಪುರ, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾಜಕೀಯದಲ್ಲಿ ಅಧಿಕಾರಕ್ಕೆ ಹಂಬಲಿಸೋದು ಸಾಮಾನ್ಯ. ಕೆಲವರಿಗೆ ಸಿಗುತ್ತದೆ ಕೆಲವರಿಗೆ ಸಿಗೋದಿಲ್ಲ. ಸಾಯುವವರೆಗೂ ಕೆಲವರಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ಸಿಗೋದಿಲ್ಲ. ಆದ್ದರಿಂದ ಅದೇನು ವಿಶೇಷ ಬೆಳವಣಿಗೆ ಏನಲ್ಲ, ಅಧಿಕಾರಕ್ಕಾಗಿ ಪೈಪೋಟಿ ಇದ್ದೇ ಇರುತ್ತದೆ.ಆಧಿಕಾರವನ್ನು ವಾಮಮಾರ್ಗದ ಮೂಲಕ ಸಾಧಿಸಬಾರದು ಎಂದು ಬಾಗಲಕೋಟೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ಭಾನವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮ ಮಾರ್ಗದ ಮೂಲಕ ಸಾಧಿಸಬೇಕು.ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇ ಐದು ವರ್ಷ ಆಡಳಿತ ಮಾಡ್ತಿನಿ ಅಂತಾರೆ. ಸಹಜ ಅವರಿಗೆ ಆ ಆಸೆ ಇದೆ,ಅದರೆ ಬಗ್ಗೆ ತಪ್ಪು ತಿಳಿದುಕೊಳ್ಳೋದಕ್ಕೆ ಆಗೋದಿಲ್ಲ.ಡಿಸಿಎಂ ಆದವರು ಮುಖ್ಯಮಂತ್ರಿ ಆಗಬೇಕು ಅಂತ ಆಸೆ ಪಡ್ತಾರೆ.ಆದರೆ ಕೆಲವೊಂದು ಸಾರಿ ಡೆಪ್ಯುಟಿ ಸಿಎಂ ಆದವರು. ಡೆಪ್ಯುಟಿ ಮುಖ್ಯಮಂತ್ರಿ ಆಗಿಯೇ ನಿವೃತ್ತಿಯಾಗಬಹುದು. ನನಗೆ ಸಿಗಲಿಲ್ಲ ಅಂತ ಪಶ್ಚಾತ್ತಾಪ ಪಡೋದು ಬೇಡ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅಪೇಕ್ಷೆ ವಿಚಾರಕ್ಕೆ ಪ್ರತಿಕ್ರಿಯಿಸಿ,ರೇಸ್ ಒಲವು ತೋರಿಸುವಂತದ್ದು ಇರಬಹುದು. ಆಸೆ ಇರುತ್ತದೆ ಮುಖ್ಯಮಂತ್ರಿ ಯಾಗಿ ನನ್ನ ರಾಜ್ಯದಲ್ಲಿ ನಾನು ಇರಬೇಕು ಅಂತ.೧೯೭೯ ರಿಂದ ೧೯೯೫ ನೇ ಇಸ್ವಿವರೆಗೆ ನಾನೆ ಪಕ್ಷದ ಸಂಘಟನೆ ನಾನೆ ನಿರ್ವಹಿಸಿದ್ದೇನೆ. ಆದರೆ ಆಗ ನನ್ನ ಬದಲು ಆರ್ ಗುಂಡೂರಾವ್ ಮುಖ್ಯಮಂತ್ರಿ ಆದರು. ಆಮೇಲೆ ಬಂಗಾರಪ್ಪಮುಖ್ಯಮಂತ್ರಿ ಆದರು.ಅದಕ್ಕಿಂತ ಮೊದಲು ವೀರೇಂದ್ರ ಪಾಟಿಲ್ ಮುಖ್ಯಮಂತ್ರಿ ಆದರು. ಹಾಗಂತ ನಾನಾಗಲಿಲ್ಲ ಅಂತ ಪಶ್ಚಾತ್ತಾಪ ಪಡಬೇಕಾಗಿಲ್ಲ. ನಮಗೆ ಅರ್ಹತೆ ಇದ್ದರೆ, ಸರದಿ ಬಂದರೆ ಮುಖ್ಯಮಂತ್ರಿ ಆಗೇ ಆಗ್ತೀವಿ. ನಾನು ೧೯೮೦ ರಲ್ಲೇ ಮುಖ್ಯಮಂತ್ರಿ ಆಗಬೇಕಿತ್ತು, ಆಗಲಿಲ್ಲ ಹತ್ತು ವರ್ಷ ಕಾದೆ.ನನ್ನಿಂದಲೇ ಪಕ್ಷದ ಅಧಿಕಾರಕ್ಕೆಬಂತು ಅಂತ ಹೇಳಲಿಕ್ಕೆ ಆಗೋದಿಲ್ಲ.ಎಷ್ಟು ವರ್ಷ ಸಿಎಂ ಆದೆವು ಅನ್ನೋದು ಮುಖ್ಯವಲ್ಲ.ಏನು ಕೆಲಸ ಮಾಡಿದೆವು ಎಂಬುದು ಮುಖ್ಯ ಎಂದು ತಿಳಿಸಿದರು.
ದೇಶವನ್ನು ಮುಕ್ತಕ್ಕೆ ಗ್ಯಾರಂಟಿ ಅವಶ್ಯ :
ಗ್ಯಾರಂಟಿಗಳ ಬಗ್ಗೆ ಹಗುರವಾಗಿ ಮಾತಾಡಬಾರದು.ಈ ದೇಶದಲ್ಲಿ ಹಂಗರ್ ಇಂಡೆಕ್ಷ್ ಇದೆ. ವರ್ಲ್ಡ್ ಇಂಡೆಕ್ಷ್ ನಲ್ಲಿ ನಮ್ಮ ದೇಶದ ಸ್ಥಾನ ಕೆಳಗೆ ಇದೆ.ಹಸಿವಿನಿಂದ ದೇಶವನ್ನು ಮುಕ್ತ ಮಾಡಬೇಕು.ಈ ಗ್ಯಾರಂಟಿಗಳು ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿವೆ.ಅದನ್ನು ಅರಿತುಕೊಂಡೆ ಮೋದಿ ಅವರು ಗ್ಯಾರಂಟಿ ಮಾಡ್ತಿದಾರಲ್ಲ.ನಾವು ಮಾಡಿದ ಗ್ಯಾರಂಟಿಗಳನ್ನು ಅವರೇ ಅನೇಕ ರಾಜ್ಯದಲ್ಲಿ ಅನುಷ್ಟಾನ ಮಾಡಲಿಲ್ಲವಾ. ರಾಜ್ಯದಲ್ಲಿ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಟೀಕೆ ಮಾಡಿ ರಾಜಕಾರಣ ಮಾಡ್ತಾರೆ.ಆದರೆ ಅಲ್ಲಿ ಬೇರೆ ರಾಜ್ಯದಲ್ಲಿ ಅವುಗಳನ್ನೇ ಜಾರಿ ಮಾಡ್ತಿದಾರೆ.ಬಡತನದ ನಿವಾರಣೆಗಾಗಿ ಅನೇಕ ಕೆಲಸ ಮಾಡ್ತೇವೆ. ಗ್ಯಾರಂಟಿ ಅದರಲ್ಲಿ ಒಂದು ಭಾಗ ಎಂದು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಪ್ರಶಂಸೀಸಿದರು.
ಗ್ಯಾರಂಟಿಯಿಂದ ಸರಕಾರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಂಚ ನಿಂತರೆ ಎಲ್ಲದಕ್ಕೂ ಹಣವಿದೆ. ಕಾಂಗ್ರೆಸ್ ಸರಕಾರದ ಲಂಚಗುಳಿತನ ಬಗ್ಗೆ ಮಾತಾಡಿದ ಮೊಯ್ಲಿ.ಸಂಪನ್ಮೂಲ ಕ್ರೂಢೀಕರಣ ತೆರಿಗೆ,ವ್ಯಾಟ್ ಇರಬಹುದು,ಜಿ ಎಸ್ ಟಿ ಇರಬಹುದು.ಅದೆಲ್ಲವನ್ನು ಸರಿಯಾಗಿ ವಸೂಲಿ ಮಾಡಿದರೆ ಎಲ್ಲದಕ್ಕೂ ಹಣ ಇದೆ.ಹಣವಿಲ್ಲ ಅಂತೇನಿಲ್ಲ ನಾನು ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದೋನು.ಸರಿಯಾಗಿ ಆಡಳಿತ ಮಾಡಿದರೆ ಎಲ್ಲದಕ್ಕೂ ಹಣ ಇದೆ.ಖರ್ಚು ಮಾಡುವವರಿಗೆ ಹಣವಿದೆ.ಖರ್ಚು ಮಾಡದವರಿಗೆ ಹಣವಿಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande