ಬಳ್ಳಾರಿ : ಆಗಸ್ಟ್ 7ರಂದು ಕುಡತಿನಿಯಿಂದ `ಸಂಡೂರು ಚಲೋ' ಪಾದಯಾತ್ರೆ
ಬಳ್ಳಾರಿ, 03 ಆಗಸ್ಟ್ (ಹಿ.ಸ.) : ಆ್ಯಂಕರ್ : ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿರುವ ಕುಡತಿನಿ, ಸಿದ್ದಮ್ಮನಹಳ್ಳಿ, ವೇಣಿವೀರಾಪುರ ಸೇರಿ ಒಟ್ಟು ಆರು ಗ್ರಾಮದ 12500 ಎಕರೆ ಭೂ ಸಂತ್ರಸ್ತರು 961 ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು ನ್ಯಾಯಾಲಯದ ಆದೇಶದ ಪ್ರಕಾರ ಭೂಬೆಲೆಯನ್ನು ನೀಡಲು ಆಗ್
ಬಳ್ಳಾರಿ : ಆಗಸ್ಟ್ 7ರಂದು ಕುಡತಿನಿಯಿಂದ `ಸಂಡೂರು ಚಲೋ' ಪಾದಯಾತ್ರೆ


ಬಳ್ಳಾರಿ : ಆಗಸ್ಟ್ 7ರಂದು ಕುಡತಿನಿಯಿಂದ `ಸಂಡೂರು ಚಲೋ' ಪಾದಯಾತ್ರೆ


ಬಳ್ಳಾರಿ, 03 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿರುವ ಕುಡತಿನಿ, ಸಿದ್ದಮ್ಮನಹಳ್ಳಿ, ವೇಣಿವೀರಾಪುರ ಸೇರಿ ಒಟ್ಟು ಆರು ಗ್ರಾಮದ 12500 ಎಕರೆ ಭೂ ಸಂತ್ರಸ್ತರು 961 ದಿನಗಳಿಂದ ಕುಡತಿನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು ನ್ಯಾಯಾಲಯದ ಆದೇಶದ ಪ್ರಕಾರ ಭೂಬೆಲೆಯನ್ನು ನೀಡಲು ಆಗ್ರಹಿಸಿ ಆಗಸ್ಟ್ 7ರ ಗುರುವಾರ ಕುಡತಿನಿಯಿಂದ `ಸಂಡೂರು ಚಲೋ' ಪಾದಯತ್ರೆ ಪ್ರಾರಂಭವಾಗಲಿದೆ ಎಂದು ಕಾರ್ಮಿಕ ಸಂಘಟನೆಗಳ ರಾಜ್ಯ ಮುಖಂಡ ಯು. ಬಸವರಾಜ್ ಅವರು ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗಾರರಿಗೆ ಭಾನುವಾರ ಈ ವಿಷಯ ತಿಳಿಸಿದ ಅವರು, ಆರು ಗ್ರಾಮಗಳ ರೈತರಿಂದ ಬ್ರಹ್ಮಿಣಿ,

ಲಕ್ಷ್ಮಿ ಮಿತ್ತಲ್ ಮತ್ತು ಎನ್‍ಎಂಡಿಸಿ ಕಾರ್ಖಾನೆಗಳಿಗಾಗಿ ಭೂಮಿಯನ್ನು ಕಡಿಮೆ ಬೆಲೆಗೆ ಸ್ವಾಧೀನ ಮಾಡಿಕೊಂಡಿರುವ ಕೆಐಎಡಿಬಿಯು ಹೆಚ್ಚಿನ ಪರಿಹಾರವನ್ನು ನೀಡಲು ನ್ಯಾಯಾಲಯ ನೀಡಿದ ಆದೇಶವನ್ನು ಜಾರಿ ಮಾಡುತ್ತಿಲ್ಲ. ಕಾರಣ ಸಂಸದರು ಮತ್ತು ಶಾಸಕರ ಕಣ್ಣು ತೆರೆಸಲಿಕ್ಕಾಗಿ ಕುಡತಿನಿಯಿಂದ ಆಗಸ್ಟ್ 7ರ ಗುರುವಾರದಿಂದ ಪಾದಯಾತ್ರೆ ಪ್ರಾರಂಭಿಸಲಾಗುತ್ತದೆ ಎಂದರು.

ಭೂ ಸಂತ್ರಸ್ತ ರೈತರು ನಡೆಸುತ್ತಿರುವ `ಸಂಡೂರು ಚಲೋ' ಪಾದಯಾತ್ರೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು, ಜನಪರ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳುತ್ತಿವೆ. ಪಾದಯಾತ್ರೆಯು ಶಾಂತಿಯುತವಾಗಿ ನಡೆಯಲಿದೆ. ಸಂಡೂರು ಪಟ್ಟಣವನ್ನು ತಲುಪಿದ ನಂತರ, ಶಾಸಕರಾದ ಇ. ಅನ್ನಪೂರ್ಣ ತುಕಾರಾಂ ಮತ್ತು ಸಂಸದರಾದ ಇ. ತುಕಾರಾಂ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿ ನ್ಯಾಯಾಲಯದ ಆದೇಶದ ಪ್ರಕಾರ ಪ್ರತಿ ಎಕರೆಗೆ 1 ಕೋಟಿಎ 56 ಲಕ್ಷ ರೂಪಾಯಿ ಪರಿಹಾರ ನೀಡಲು ಮನವಿ ಮಾಡಲಾಗುತ್ತದೆ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಜೆ. ಸತ್ಯಬಾಬು, ಎಂ. ತಿಪ್ಪೇಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande