ಡೆಹ್ರಾಡೂನ್, 29 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದಲ್ಲಿ ನಿರಂತರ ಧಾರಾಕಾರ ಮಳೆಯ ನಡುವೆ ಗುರುವಾರ ರಾತ್ರಿ ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳಲ್ಲಿ ಮೇಘಸ್ಫೋಟ ಸಂಭವಿಸಿ ಭಾರೀ ನಷ್ಟ ಉಂಟಾಗಿದೆ.
ಅನೇಕ ಮನೆಗಳು, ದೇವಾಲಯಗಳು ಹಾಗೂ ಹಸುಗಳ ಕೊಟ್ಟಿಗೆಗಳು ಅವಶೇಷಗಳಡಿ ಹೂತು ಹೋಗಿದ್ದು, ಹಲವು ಮಂದಿ ಸಿಲುಕಿಕೊಂಡಿರುವುದು ಮತ್ತು ಕಾಣೆಯಾಗಿರುವುದು ವರದಿಯಾಗಿದೆ.
ಚಮೋಲಿ ಜಿಲ್ಲೆ ದೇವಲ್ ತಹಸಿಲ್‌ನ ಮೊಪಾಟಾ ಗ್ರಾಮದಲ್ಲಿ ರಾತ್ರಿ ಸಂಭವಿಸಿದ ಪ್ರವಾಹದಂತಹ ಪರಿಸ್ಥಿತಿಯಿಂದ ತಾರಾ ಸಿಂಗ್ ಮತ್ತು ಅವರ ಪತ್ನಿ ಕಾಣೆಯಾಗಿದ್ದಾರೆ. ಅದೇ ಗ್ರಾಮದ ವಿಕ್ರಮ್ ಸಿಂಗ್ ಮತ್ತು ಅವರ ಪತ್ನಿ ಗಾಯಗೊಂಡಿದ್ದಾರೆ. ಮಳೆಯಿಂದಾಗಿ 15–20 ಹಸುಗಳು ಅವಶೇಷಗಳಡಿ ಹೂತುಹೋಗಿವೆ.
ರುದ್ರಪ್ರಯಾಗ ಜಿಲ್ಲೆಯಲ್ಲಿ ಬಸುಕೆದಾರ್ ಉಪ-ತಹಸಿಲ್ ಮತ್ತು ಜಖೋಲಿ ಬ್ಲಾಕ್ ವ್ಯಾಪ್ತಿಯ ಹಲವೆಡೆ ಹಾನಿ ಸಂಭವಿಸಿದೆ. ಜಖೋಲಿ ಬ್ಲಾಕ್‌ನ ಚೆನಗಡ್ ಮಾರುಕಟ್ಟೆ ಸಂಪೂರ್ಣ ನಾಶವಾಗಿದ್ದು, ಸುಮಾರು 18–20 ಜನರು ಕಾಣೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಿಮಾನಾ–ದಂಕೋಟ್ ಪ್ರದೇಶದಲ್ಲಿ ಆಸ್ತಿಪಾಸ್ತಿಗಳಿಗೆ ತೀವ್ರ ಹಾನಿ. ಖಟೋಲಿ ಮತ್ತು ಬಡೇತ್ ಗ್ರಾಮಗಳಲ್ಲಿನ ಪ್ರಾಚೀನ ದೇವಾಲಯಗಳು ಕೂಡ ಹಾನಿಗೊಳಗಾಗಿವೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ, “ಪ್ರಭಾವಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ನಾನು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ” ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa