ನೇಪಾಳ ಗಡಿಯ ಮೂಲಕ ಬಿಹಾರ ಪ್ರವೇಶಿಸಿದ ಭಯೋತ್ಪಾದಕರು
ಪಾಟ್ನಾ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಜೈಶ್-ಎ-ಮೊಹಮ್ಮದ್ ಸಂಘಟನೆಯ ಮೂವರು ಭಯೋತ್ಪಾದಕರು ನೇಪಾಳ ಗಡಿಯ ಮೂಲಕ ಬಿಹಾರ ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಶಂಕಿತರು ಹಸ್ನೈನ್ ಅಲಿ, ಆದಿಲ್ ಹುಸೇನ್ ಹಾಗೂ ಮೊಹಮ್ಮದ್ ಉಸ್ಮಾನ್. ಅವರ
ನೇಪಾಳ ಗಡಿಯ ಮೂಲಕ ಬಿಹಾರ ಪ್ರವೇಶಿಸಿದ ಭಯೋತ್ಪಾದಕರು


ಪಾಟ್ನಾ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜೈಶ್-ಎ-ಮೊಹಮ್ಮದ್ ಸಂಘಟನೆಯ ಮೂವರು ಭಯೋತ್ಪಾದಕರು ನೇಪಾಳ ಗಡಿಯ ಮೂಲಕ ಬಿಹಾರ ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಶಂಕಿತರು ಹಸ್ನೈನ್ ಅಲಿ, ಆದಿಲ್ ಹುಸೇನ್ ಹಾಗೂ ಮೊಹಮ್ಮದ್ ಉಸ್ಮಾನ್. ಅವರು ಇತ್ತೀಚೆಗೆ ಕಠ್ಮಂಡುವಿನಿಂದ ಬಿಹಾರ ಪ್ರವೇಶಿಸಿರುವುದಾಗಿ ವರದಿ ಬಂದಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಮಧುಬನಿ, ಸಿತಾಮರ್ಹಿ, ಸುಪೌಲ್, ಅರಾರಿಯಾ, ಚಂಪಾರಣ್ ಹಾಗೂ ಕಿಶನ್‌ಗಂಜ್ ಗಡಿ ಜಿಲ್ಲೆಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಶಂಕಿತರ ಪಾಸ್‌ಪೋರ್ಟ್ ವಿವರಗಳನ್ನು ಹಂಚಿಕೊಂಡಿರುವ ಪೊಲೀಸರು ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

729 ಕಿ.ಮೀ ಉದ್ದದ ಮುಕ್ತ ಗಡಿಯ ಕಾರಣದಿಂದ ಭದ್ರತೆಯಲ್ಲಿ ಸವಾಲು ಎದುರಾಗಿದ್ದು, ಗಡಿಯಾಚೆಗಿನ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande