ಕುಪ್ವಾರಾದಲ್ಲಿ ಕರ್ತವ್ಯ ನಿರತ ಯೋಧ ಹುತಾತ್ಮ
ಕುಪ್ವಾರಾ 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಕಾರ್ಯಾಚರಣೆಯ ಕರ್ತವ್ಯದ ವೇಳೆ ಸೇನೆಯ ಹವಾಲ್ದಾರ್ ಇಕ್ಬಾಲ್ ಅಲಿ ಹುತಾತ್ಮರಾಗಿದ್ದಾರೆ. ಈ ಕುರಿತು ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದ್ದು “ಧೈರ್ಯಶಾಲಿ ಹವಾಲ್ದಾರ್ ಇಕ್ಬಾಲ್ ಅಲಿ ಮಾಡಿದ ಅತ್ಯುನ್ನತ ತ್ಯಾಗಕ್ಕೆ
ಕುಪ್ವಾರಾದಲ್ಲಿ ಕರ್ತವ್ಯ ನಿರತ ಯೋಧ ಹುತಾತ್ಮ


ಕುಪ್ವಾರಾ 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಕಾರ್ಯಾಚರಣೆಯ ಕರ್ತವ್ಯದ ವೇಳೆ ಸೇನೆಯ ಹವಾಲ್ದಾರ್ ಇಕ್ಬಾಲ್ ಅಲಿ ಹುತಾತ್ಮರಾಗಿದ್ದಾರೆ.

ಈ ಕುರಿತು ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದ್ದು “ಧೈರ್ಯಶಾಲಿ ಹವಾಲ್ದಾರ್ ಇಕ್ಬಾಲ್ ಅಲಿ ಮಾಡಿದ ಅತ್ಯುನ್ನತ ತ್ಯಾಗಕ್ಕೆ ಗೌರವ ಸಲ್ಲಿಸುತ್ತೇವೆ. ಅವರ ಧೈರ್ಯ ಮತ್ತು ಸಮರ್ಪಣೆ ಯಾವಾಗಲೂ ಸ್ಫೂರ್ತಿಯಾಗಿದೆ” ಎಂದು ಎಕ್ಸ ಖಾತೆಯಲ್ಲಿ ತಿಳಿಸಿದೆ.

ಚಿನಾರ್‌ನ ಯೋಧರು ಅವರ ಶೌರ್ಯ ಮತ್ತು ತ್ಯಾಗಕ್ಕೆ ನಮನ ಸಲ್ಲಿಸುತ್ತಿದ್ದು, ದುಃಖಿತ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ನಿಂತು ಅವರ ಯೋಗಕ್ಷೇಮಕ್ಕಾಗಿ ಬದ್ಧವಾಗಿರುವುದಾಗಿ ಸೇನೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande