ಪಂಜಾಬ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಎಸ್‌ಎಫ್ ರಕ್ಷಣಾ ಕಾರ್ಯಾಚರಣೆ
ಚಂಡೀಗಡ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಪಂಜಾಬ್‌ನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ, ಗಡಿ ಭದ್ರತಾ ಪಡೆ ಯೋಧರು ನೂರಾರು ಜನರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಟ್ಲೆಜ್ ನದಿಯ ನೀರಿನ ಮಟ್ಟ ಏರಿಕೆಯಿಂದ ಗಡಿ ಹಳ್ಳಿಗಳಲ್ಲಿ ಜನರು ಸಿಲುಕಿಕೊಂಡಿದ್ದು, ಕಳೆದ ಎರಡು ದಿನಗಳಿಂದ ಬಿಎಸ್‌ಎಫ್ ಜ
Rescue


ಚಂಡೀಗಡ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪಂಜಾಬ್‌ನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ, ಗಡಿ ಭದ್ರತಾ ಪಡೆ ಯೋಧರು ನೂರಾರು ಜನರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಟ್ಲೆಜ್ ನದಿಯ ನೀರಿನ ಮಟ್ಟ ಏರಿಕೆಯಿಂದ ಗಡಿ ಹಳ್ಳಿಗಳಲ್ಲಿ ಜನರು ಸಿಲುಕಿಕೊಂಡಿದ್ದು, ಕಳೆದ ಎರಡು ದಿನಗಳಿಂದ ಬಿಎಸ್‌ಎಫ್ ಜವಾನರು ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಫಿರೋಜ್‌ಪುರ ಜಿಲ್ಲೆಯ ಧೀರಗಢ, ನಿಹಾಲ ಲವೇರಾ ಮತ್ತು ಸುಲ್ತಾನ್‌ವಾಲಾ ಗ್ರಾಮಗಳಲ್ಲಿ ಗ್ರಾಮಸ್ಥರನ್ನು ದೋಣಿಗಳ ಸಹಾಯದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಇದೇ ವೇಳೆ, ಪ್ರವಾಹದ ನೀರು ಸೇನಾ ಶಿಬಿರ ತಲುಪಿದ ಸಂದರ್ಭದಲ್ಲಿ ಬಿಎಸ್‌ಎಫ್ ತಂಡವು ಆರು ಸೈನಿಕರನ್ನು ಹಾಗೂ ಪ್ರಮುಖ ಶಸ್ತ್ರಾಸ್ತ್ರಗಳನ್ನು ರಕ್ಷಿಸಿದೆ.

ಗುರುದಾಸ್ಪುರ ಜಿಲ್ಲೆಯ ಮಕೋಡಾ ಹಾಗೂ ಚಕ್ಮಕೋಡಾ ಗ್ರಾಮಗಳಲ್ಲಿ 70 ಜನರನ್ನು ರಕ್ಷಿಸಲಾಗಿದ್ದು, ಫಿರೋಜ್‌ಪುರದ ಕಲುವಾಲಾ ಗ್ರಾಮದಲ್ಲಿ 14 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು. ಫಜಿಲ್ಕಾದ ಮಹರ್ ಜಮ್ಶೇರ್ ಗ್ರಾಮದಲ್ಲಿ ಅಸ್ವಸ್ಥ ವೃದ್ಧನನ್ನು ಬಿಎಸ್‌ಎಫ್ ಪಡೆಗಳು ಆಸ್ಪತ್ರೆಗೆ ಸ್ಥಳಾಂತರಿಸಿವೆ.

ಭದ್ರತಾ ಕಾರ್ಯದೊಂದಿಗೆ ಪರಿಹಾರ ಕಾರ್ಯಾಚರಣೆಯಲ್ಲಿಯೂ ತೊಡಗಿಕೊಂಡಿರುವ ಬಿಎಸ್‌ಎಫ್, ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಪೀಡಿತರ ನೆರವಿಗೆ ಧಾವಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande