ಬೆಂಗಳೂರು, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ೧೮ ವರ್ಷಗಳ ಬಳಿಕ ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಜಯಗಳಿಸಿದಾಗ ಜಗತ್ತಿನಾದ್ಯಂತ ಸಂಭ್ರಮದ ಅಲೆ ಹರಡಿತ್ತು. ಆದರೆ ಆ ಗೆಲುವಿನ ಖುಷಿ ಕೇವಲ 24 ಗಂಟೆಗಳಿಗೆ ಸೀಮಿತವಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಿಂದ ೧೧ ಮಂದಿ ಸಾವಿಗೀಡಾದ ದುರ್ಘಟನೆ ನಡೆದಿತ್ತು.
ಈ ದುರ್ಘಟನೆಯ ಬಳಿಕ ಆರ್‌ಸಿಬಿ ತಂಡ ಸಂಪೂರ್ಣ ಮೌನವಾಗಿತ್ತು, ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಸುಮಾರು ಮೂರು ತಿಂಗಳ ನಂತರ, ತಂಡ ತನ್ನ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಭಾವನಾತ್ಮಕ ಸಂದೇಶ ಹಂಚಿಕೊಂಡಿದೆ.
ಆರ್‌ಸಿಬಿ ಸಂದೇಶ:
ಆತ್ಮೀಯ 12ನೇ ಮ್ಯಾನ್ ಆರ್ಮಿ, ಇದು ನಿಮಗೆ ನಮ್ಮ ಹೃದಯಪೂರ್ವಕ ಪತ್ರ.
ಜೂನ್ 4ರಂದು ಸಂಭವಿಸಿದ ಆ ದುರ್ಘಟನೆ ನಮ್ಮ ಹೃದಯವನ್ನು ಒಡೆದಿತ್ತು. ಆ ನಂತರದ ಮೌನ ನಮ್ಮ ನೋವಿನ ಪ್ರತಿಫಲ ಎಂದು ತಿಳಿಸಿದೆ.
ಮೌನದ ಅವಧಿಯಲ್ಲಿ ನಾವು ಕೇಳಿದ್ದೇವೆ, ಕಲಿತಿದ್ದೇವೆ. ಕೇವಲ ಪ್ರತಿಕ್ರಿಯೆಗಿಂತ ಹೆಚ್ಚಾದ, ಶಾಶ್ವತವಾದ ಏನನ್ನಾದರೂ ಕಟ್ಟಬೇಕೆಂದು ನಿರ್ಧರಿಸಿದ್ದೇವೆ. ಅದೇ ಆರ್‌ಸಿಬಿ ಕೇರ್ಸ ಇದು ನಮ್ಮ ಅಭಿಮಾನಿಗಳಿಗೆ ಗೌರವ ನೀಡುವ, ಅವರ ನೋವುಗಳಿಗೆ ಸ್ಪಂದಿಸುವ, ಸಮುದಾಯದೊಂದಿಗೆ ಬೆಸೆದುಕೊಳ್ಳುವ ವೇದಿಕೆ ಎಂದು ಘೋಷಿಸಿದೆ.
ಪತ್ರದ ಕೊನೆಯಲ್ಲಿ
ಇಂದು ನಾವು ಸಂಭ್ರಮದಿಂದ ಅಲ್ಲ, ಕಾಳಜಿಯೊಂದಿಗೆ ಹಿಂದಿರುಗಿದ್ದೇವೆ. ನಿಮ್ಮ ಜೊತೆ ನಿಂತು, ಒಟ್ಟಾಗಿ ಮುಂದೆ ಸಾಗಲು. ಆರ್‌ಸಿಬಿಗೆ ಕಾಳಜಿ ಇದೆ, ಎಂದೆಂದಿಗೂ ಇರಲಿದೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa