ನವದೆಹಲಿ, 28 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತವು $1 ಟ್ರಿಲಿಯನ್ ಕಡಲ ಹೂಡಿಕೆ ಮಾರ್ಗಸೂಚಿ ಮೂಲಕ ಜಾಗತಿಕ ಪಾಲುದಾರಿಕೆಗೆ ಬಾಗಿಲು ತೆರೆಯುತ್ತಿದೆ ಎಂದು ಕೇಂದ್ರ ಬಂದರು, ಹಡಗು ಹಾಗೂ ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ದೆಹಲಿಯಲ್ಲಿ ರಾಯಭಾರಿಗಳೊಂದಿಗೆ ನಡೆದ ದುಂಡು ಮೇಜಿನ ಸಭೆಯಲ್ಲಿ ಹೇಳಿದರು.
ಅಕ್ಟೋಬರ್ 27 ರಿಂದ 31 ರವರೆಗೆ ಮುಂಬೈನಲ್ಲಿ ನಡೆಯಲಿರುವ ಇಂಡಿಯಾ ಮ್ಯಾರಿಟೈಮ್ ವೀಕ್ 2025ಗೆ ಸಿದ್ಧತೆಗಾಗಿ ಸಭೆ ಆಯೋಜಿಸಲಾಗಿತ್ತು. ಬಂದರು ಆಧುನೀಕರಣ, ಹಸಿರು–ಡಿಜಿಟಲ್ ಸಾಗಣೆ, ಹಡಗು ನಿರ್ಮಾಣ, ಹಸಿರು ಹೈಡ್ರೋಜನ್ ಕೇಂದ್ರಗಳಲ್ಲಿ ಹೂಡಿಕೆ ಅವಕಾಶಗಳನ್ನು ಸೋನೋವಾಲ್ ವಿವರಿಸಿದರು.
ಇದೇ ವೇಳೆ ವಧವನ್ ಬಂದರು, ಗಲಾಥಿಯಾ ಬೇ ಟ್ರಾನ್ಸ್‌ಶಿಪ್‌ಮೆಂಟ್ ಬಂದರು, ಟ್ಯೂನ ಟೆಕ್ರಾ ಟರ್ಮಿನಲ್ ಸೇರಿದಂತೆ ಮೆಗಾ ಯೋಜನೆಗಳ ಮಾಹಿತಿಯನ್ನು ಅಧಿಕಾರಿಗಳು ಹಂಚಿಕೊಂಡರು.
ರಾಯಭಾರಿಗಳು ಹಸಿರು ಸಾಗಣೆ, ಡಿಜಿಟಲೀಕರಣ, ಹೈಡ್ರೋಜನ್ ಚಾಲಿತ ಹಡಗುಗಳು ಕುರಿತ ಭಾರತದ ಪ್ರಯತ್ನಗಳನ್ನು ಶ್ಲಾಘಿಸಿದರು. ಮುಂಬೈ ಸಮಾವೇಶದಲ್ಲಿ 100 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 200 ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು ಹಾಗೂ 500 ಪ್ರದರ್ಶಕರು ಭಾಗವಹಿಸುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa