ಜನಧನ್ ಯೋಜನೆಗೆ 11 ವರ್ಷ :ಸ್ವಾವಲಂಬಿ ಭಾರತದ ಗುರಿ-ಅಮಿತ್ ಶಾ
ನವದೆಹಲಿ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಾರಂಭಿಸಿದ್ದ ‘ಪ್ರಧಾನ ಮಂತ್ರಿ ಜನಧನ್ ಯೋಜನೆ’ಗೆ ಇಂದು 11 ವರ್ಷಗಳು ಪೂರ್ಣಗೊಂಡಿವೆ. ವಿಶ್ವದ ಅತಿ ದೊಡ್ಡ ಬ್ಯಾಂಕಿಂಗ್ ಒಳಗೊಳ್ಳುವ ಉಪಕ್ರಮವೆಂದು ಪರಿಗಣಿಸಲ್ಪಟ್ಟ ಈ ಯೋಜನೆಯಡಿ ಇಂದಿಗೆ 56 ಕೋಟಿಗೂ ಹೆ
Amit sha


ನವದೆಹಲಿ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಾರಂಭಿಸಿದ್ದ ‘ಪ್ರಧಾನ ಮಂತ್ರಿ ಜನಧನ್ ಯೋಜನೆ’ಗೆ ಇಂದು 11 ವರ್ಷಗಳು ಪೂರ್ಣಗೊಂಡಿವೆ. ವಿಶ್ವದ ಅತಿ ದೊಡ್ಡ ಬ್ಯಾಂಕಿಂಗ್ ಒಳಗೊಳ್ಳುವ ಉಪಕ್ರಮವೆಂದು ಪರಿಗಣಿಸಲ್ಪಟ್ಟ ಈ ಯೋಜನೆಯಡಿ ಇಂದಿಗೆ 56 ಕೋಟಿಗೂ ಹೆಚ್ಚು ಜನಧನ್ ಖಾತೆಗಳು ತೆರೆದಿದ್ದು, ಅವುಗಳಲ್ಲಿ ಸುಮಾರು 56% ಮಹಿಳೆಯರ ಹೆಸರಿನಲ್ಲಿ ಇವೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜನಧನ್ ಯೋಜನೆ ದಶಕಗಳಿಂದ ವಂಚಿತರಾಗಿದ್ದ ಕೋಟ್ಯಂತರ ಜನರನ್ನು ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಸಂಪರ್ಕಿಸಿದೆ. ಇದರ ಫಲವಾಗಿ ಫಲಾನುಭವಿಗಳು ಬ್ಯಾಂಕಿಂಗ್, ವಿಮೆ, ಪಿಂಚಣಿ ಸೇರಿದಂತೆ ನಾನಾ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಇದು ಸ್ವಾವಲಂಬಿ ಭಾರತದ ಗುರಿ ಸಾಧಿಸಲು ಮಹತ್ವದ ಹೆಜ್ಜೆಯಾಗಿದೆ ಎಂದು ಅಮಿತ್ ಶಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande