ಜಮ್ಮು, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರಿ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಜಮ್ಮುವಿನ ರೈಲು ಸೇವೆಗಳು ಪುನಃ ಪ್ರಾರಂಭಗೊಂಡಿವೆ. ಆರು ರೈಲುಗಳು ತಮ್ಮ ಗಮ್ಯಸ್ಥಾನಗಳಿಗೆ ಹೊರಡಲಿದ್ದು, ಇದರಲ್ಲಿ ಮೊದಲು ರದ್ದುಗೊಂಡ ಮೂರು ರೈಲುಗಳು ಹಾಗೂ ಮಧ್ಯದಲ್ಲಿ ನಿಲ್ಲಿಸಲಾದ ಮೂರು ರೈಲುಗಳಿವೆ.
ಜಮ್ಮುವಿನಿಂದ ಹೊರಡುವ ರೈಲುಗಳಲ್ಲಿ ಜಮ್ಮು ತಾವಿ–ಕಾಮಾಖ್ಯ ಎಕ್ಸ್‌ಪ್ರೆಸ್, ಜಮ್ಮು–ಸಂಬಲ್‌ಪುರ, ಜಮ್ಮು–ಅಂಬೇಡ್ಕರ್ ನಗರ, ಜಮ್ಮು–ವಾರಣಾಸಿ, ಜಮ್ಮು–ಬಾಂದ್ರಾ ಮತ್ತು ಜಮ್ಮು–ಛಪ್ರಾ ರೈಲುಗಳು ಸೇರಿವೆ.
ಮಂಗಳವಾರ ರಾತ್ರಿ ಭಾರಿ ಮಳೆಯಿಂದಾಗಿ ಜಮ್ಮು, ಕತ್ರಾ ಹಾಗೂ ಉಧಮ್‌ಪುರಕ್ಕೆ ಹೋಗುವ–ಬರುವ 22 ರೈಲುಗಳನ್ನು ರದ್ದುಗೊಳಿಸಲಾಗಿತ್ತು ಮತ್ತು 27 ರೈಲುಗಳನ್ನು ಮಧ್ಯದಲ್ಲಿ ನಿಲ್ಲಿಸಲಾಗಿತ್ತು. ಅದರಲ್ಲಿ 9 ರೈಲುಗಳು ಕತ್ರಾದಿಂದ, 1 ರೈಲು ಜಮ್ಮುವಿನಿಂದ ಹೊರಟಿದ್ದವು.
ಆದಾಗ್ಯೂ, ಕತ್ರಾ–ಶ್ರೀನಗರ ವಿಭಾಗದಲ್ಲಿ ರೈಲು ಸಂಚಾರ ನಿರಂತರವಾಗಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜಮ್ಮು ಪ್ರದೇಶದಲ್ಲಿ ಸೋಮವಾರ ರಾತ್ರಿ ಆರಂಭವಾದ ಮಳೆ ದಶಕಗಳಲ್ಲಿಯೇ ಅತಿ ಹೆಚ್ಚು ದಾಖಲಾಗಿದ್ದು, ಕೇವಲ 38 ಗಂಟೆಗಳಲ್ಲಿ 380 ಮಿಮೀ ಮಳೆಯಾಗಿದೆ.
ಪ್ರವಾಹ, ಭೂಕುಸಿತಗಳಿಂದ ಸೇತುವೆಗಳು, ರಸ್ತೆಗಳು ಹಾನಿಗೊಂಡಿದ್ದು, ವಸತಿ ಹಾಗೂ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. ಅನೇಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa