ಸೆ.೧೫ರಂದು ಪ್ರಧಾನಮಂತ್ರಿ ಮೋದಿ ಬಿಹಾರ ಭೇಟಿ
ಪಾಟ್ನಾ, 27 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಯ ಸದ್ದಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15ರಂದು ಪೂರ್ಣಿಯಾಗೆ ಆಗಮಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್, ಪ್ರಧಾನಿ ಅವರ ಈ ಭೇಟಿಯಲ್ಲಿ ಪೂರ್ಣಿಯಾ ವಿಮಾನ ನಿಲ
Pm


ಪಾಟ್ನಾ, 27 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಯ ಸದ್ದಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15ರಂದು ಪೂರ್ಣಿಯಾಗೆ ಆಗಮಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್, ಪ್ರಧಾನಿ ಅವರ ಈ ಭೇಟಿಯಲ್ಲಿ ಪೂರ್ಣಿಯಾ ವಿಮಾನ ನಿಲ್ದಾಣವನ್ನು ಉದ್ಘಾಟಿಸುವುದರ ಜೊತೆಗೆ ಸೀಮಾಂಚಲಕ್ಕೆ ಕೋಟ್ಯಂತರ ಮೌಲ್ಯದ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಬಿಹಾರ ಪ್ರವಾಸ ಇದು ಏಳನೇ ಬಾರಿ ಆಗಿದ್ದು, ಈ ಹಿಂದೆ ಅವರು ಭಾಗಲ್ಪುರ, ಮಧುಬನಿ, ಸಸಾರಾಮ್, ಸಿವಾನ್, ಮೋತಿಹರಿ ಹಾಗೂ ಗಯಾಗೆ ಭೇಟಿ ನೀಡಿದ್ದರು. ಕಳೆದ ಬಾರಿ ಗಯಾದಲ್ಲಿ ಸುಮಾರು ₹13 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ್ದರು.

ಈ ಬಾರಿ ಪೂರ್ಣಿಯಾ ವಿಮಾನ ನಿಲ್ದಾಣವನ್ನು ಬಿಹಾರಕ್ಕೆ ಪ್ರಧಾನ ಮಂತ್ರಿ ಉಡುಗೊರೆಯಾಗಿ ನೀಡಲಿದ್ದು, ಸೀಮಾಂಚಲದ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande