ನವದೆಹಲಿ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿರುವ 50% ಸುಂಕ ಇಂದು ಜಾರಿಗೆ ಬಂದಿದೆ. ಆಗಸ್ಟ್ 7ರಿಂದಲೇ 25% ಸುಂಕ ಜಾರಿಯಲ್ಲಿದ್ದರೆ, ಇದೀಗ ಹೆಚ್ಚುವರಿಯಾಗಿ 25% ಸೇರಿ ಒಟ್ಟಾರೆ 50% ಸುಂಕ ಅನ್ವಯವಾಗಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಈ ಸುಂಕ ವಿಧಿಸಿದ್ದಾರೆ. ಇದರ ಪರಿಣಾಮವಾಗಿ 48 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಮೇಲೆ ನೇರ ಪರಿಣಾಮ ಬೀಳುವ ಭೀತಿ ವ್ಯಕ್ತವಾಗಿದೆ.
ಈ ಸುಂಕದಿಂದ ವಸ್ತ್ರ, ಆಭರಣ, ಚರ್ಮ ಉತ್ಪನ್ನಗಳು ಹಾಗೂ ಪಾದರಕ್ಷೆಗಳ ರಫ್ತು ತೀವ್ರವಾಗಿ ಬಾಧಿತವಾಗುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa