ನವದೆಹಲಿ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಧ್ಯಪ್ರದೇಶ ಭೇಟಿ ನೀಡಲಿದ್ದು, ಇಂದೋರ್ ಜಿಲ್ಲೆಯ ಮ್ಹೋವ್ನಲ್ಲಿ ನಡೆಯಲಿರುವ ಭಾರತೀಯ ಸೇನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಆಪರೇಷನ್ ಸಿಂಧೂರ್ ನಂತರ ದೇಶದ ಮೂರು ಸೇನೆಗಳ ಕಾರ್ಯತಂತ್ರದ ನವೀಕರಣ ಮತ್ತು ಯುದ್ಧ ವಿಧಾನಗಳ ಕುರಿತು ಚರ್ಚಿಸಲು ರಾಷ್ಟ್ರೀಯ ಮಟ್ಟದ ‘ರಣ್ ಸಂವಾದ್ 2025’ ಮ್ಹೋವ್‌ನ ಆರ್ಮಿ ವಾರ್ ಕಾಲೇಜಿನಲ್ಲಿ ಆಗಸ್ಟ್ ಇಂದು ಮತ್ತು ನಾಳೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ, ಹಾಗೂ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್‌ಪ್ರೀತ್ ಸಿಂಗ್ ಉಪಸ್ಥಿತರಿರಲಿದ್ದಾರೆ.
ಮೊದಲ ಬಾರಿಗೆ ಮೂರು ಪಡೆಗಳ ಜಂಟಿ ವಿಚಾರ ಸಂಕಿರಣ ರೂಪದಲ್ಲಿ ನಡೆಯುತ್ತಿರುವ ಈ ‘ರಣ್ ಸಂವಾದ್’ದಲ್ಲಿ ಯುದ್ಧ ತಂತ್ರಗಳು, ಆಧುನಿಕ ತಂತ್ರಜ್ಞಾನಗಳ ಪ್ರಭಾವ, ಸಶಸ್ತ್ರ ಪಡೆಗಳ ಸಿದ್ಧತೆ, ಶೈಕ್ಷಣಿಕ–ರಕ್ಷಣಾ ಉದ್ಯಮದ ಸಹಭಾಗಿತ್ವ ಹಾಗೂ ‘ಆತ್ಮನಿರ್ಭರ ಭಾರತ’ದ ಪಾತ್ರದ ಕುರಿತು ಚರ್ಚೆಗಳು ನಡೆಯಲಿವೆ.
ಸೇನೆಗಳ ಹಿರಿಯ ಅಧಿಕಾರಿಗಳ ಜೊತೆಗೆ ರಕ್ಷಣಾ ಉದ್ಯಮ ತಜ್ಞರು, ಅಕಾಡೆಮಿಕ್ ವಲಯದ ತಜ್ಞರು ಹಾಗೂ ಅಂತರರಾಷ್ಟ್ರೀಯ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa