ಆರ್‌ಎಸ್‌ಎಸ್‌ ಗೀತೆ ವಿವಾದ : ಕ್ಷಮೆ ಕೇಳಿದ ಡಿ.ಕೆ.ಶಿವಕುಮಾರ್
ಬೆಂಗಳೂರು, 26 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಧಾನ ಸಭೆಯಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶಿವಕುಮಾರ್ ಕ್ಷಮೆ ಕೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ನನ್ನ ನಡೆ ಅಥವಾ ಮಾತಿನಿಂದ
Dks


ಬೆಂಗಳೂರು, 26 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಧಾನ ಸಭೆಯಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶಿವಕುಮಾರ್ ಕ್ಷಮೆ ಕೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ನನ್ನ ನಡೆ ಅಥವಾ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ನಾನು ಸಿದ್ಧ. ಯಾರ ಮನಸ್ಸಿಗೂ ನೋವುಂಟಾಗಬಾರದು ಎಂಬುದು ನನ್ನ ಬಯಕೆ. ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಆದರೆ, ತಮ್ಮ ವಿರುದ್ಧ ಧ್ವನಿ ಎತ್ತಿದ ಸ್ವಪಕ್ಷದವರ ಮೇಲೂ ಅವರು ಆಕ್ರೋಶ ಹೊರಹಾಕಿದರು. ನನ್ನ ಮಾತಿನ ಬಗ್ಗೆ ಪ್ರಶ್ನೆ ಮಾಡಿದವರು ಮೂರ್ಖರು ಎಂದಿದ್ದಾರೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಗೆ ತಿರುಗೇಟು ನೀಡಿದ್ದು, ಅವರು ಯಾರಿಗೆ ಸಲಹೆ ಕೊಡಬೇಕೋ ಅವರಿಗೆ ಕೊಡಲಿ. ನನಗೆ ಹೇಳಬೇಕಾದ ಅವಶ್ಯಕತೆ ಇಲ್ಲ ಎಂದರು.

ಆರ್‌ಎಸ್‌ಎಸ್‌ ಗೀತೆ ಹಾಡಿದರೆಂಬ ಆರೋಪವನ್ನು ತಳ್ಳಿ ಹಾಕಿದ ಶಿವಕುಮಾರ್, ನಾನು ಯಾವುದೇ ಆರ್‌ಎಸ್‌ಎಸ್‌ ಗೀತೆ ಹಾಡಿಲ್ಲ. ಅಸೆಂಬ್ಲಿಯಲ್ಲಿ ಬಿಜೆಪಿ ಸದಸ್ಯರು ಮಾತನಾಡುತ್ತಿದ್ದ ಸಂದರ್ಭ, ನಾನು ‘ಆರ್‌ಆರ್‌ಆರ್’ ಚಿತ್ರದ ಗೀತೆ ಹಾಸ್ಯವಾಗಿ ಹಾಡಿದ್ದೆ. ಅದು ವಿರೋಧ ಪಕ್ಷದವರನ್ನು ಕಾಲೆಳೆಯುವ ಪ್ರಯತ್ನ ಮಾತ್ರ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ವ್ಯಂಗ್ಯ, ಹಾಸ್ಯ ಸಾಮಾನ್ಯ ಎಂದು ವಿವರಿಸಿದರು.

ತಮ್ಮ ರಾಜಕೀಯ ಹಾದಿಯನ್ನು ನೆನಪಿಸಿಕೊಂಡ ಅವರು, 1979ರಿಂದಲೇ ನಾನು ವಿದ್ಯಾರ್ಥಿ ಸಂಘಟನೆಯ ಮೂಲಕ ಸಾರ್ವಜನಿಕ ಬದುಕಿಗೆ ಬಂದಿದ್ದೇನೆ. ನನಗೆ ಯಾರಿಂದಲೂ ಪಾಠ ಕಲಿಯಬೇಕಾಗಿಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಇರುವ ಸಂಬಂಧ ಭಕ್ತನಿಗೂ ಭಗವಂತನಿಗೂ ಇರುವಂತದ್ದು. ಅವರ ತ್ಯಾಗ, ಬಲಿದಾನ ಹಾಗೂ ಆಶೀರ್ವಾದದಿಂದಲೇ ನಾನು ರಾಜಕೀಯದಲ್ಲಿ ಬೆಳೆದಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande