ಭಾಗಲ್ಪುರ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಿಹಾರದ ಭಾಗಲ್ಪುರದಲ್ಲಿ ಇಬ್ಬರು ಪಾಕಿಸ್ತಾನಿ ಮಹಿಳೆಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಪತ್ತೆಯಾಗಿದ್ದು, ಗೃಹ ಸಚಿವಾಲಯ ಮತ್ತು ಚುನಾವಣಾ ಆಯೋಗವು ತಕ್ಷಣ ಕ್ರಮ ಕೈಗೊಂಡು ಅವುಗಳನ್ನು ತೆಗೆದುಹಾಕುವಂತೆ ಆದೇಶಿಸಿದೆ.
ಇಮ್ರಾನಾ ಖಾನಮ್ ಅಲಿಯಾಸ್ ಇಮ್ರಾನಾ ಖಾತೂನ್ ಎಂಬ ಮಹಿಳೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಹಲವಾರು ಬಾರಿ ಮತ ಚಲಾಯಿಸಿದ್ದಾಳೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಅವರ ಪಾಸ್‌ಪೋರ್ಟ್‌ನಲ್ಲಿ ಜನ್ಮದಿನಾಂಕ 1956 ಎಂದು, ಆದರೆ ಶಿಕ್ಷಣ ಇಲಾಖೆಯ ದಾಖಲೆಗಳಲ್ಲಿ 1966 ಎಂದು ಉಲ್ಲೇಖವಾಗಿರುವುದು ಗಂಭೀರ ವ್ಯತ್ಯಾಸ ತೋರಿಸಿದೆ.
ಜಿಲ್ಲಾಡಳಿತವು ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಫಾರ್ಮ್-7 ಪ್ರಕ್ರಿಯೆ ಆರಂಭಿಸಿದ್ದು, ಪ್ರಕರಣದ ಬಗ್ಗೆ ಡಿಎಸ್‌ಪಿ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಈ ಘಟನೆ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa