ಅಹಮದಾಬಾದ್, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಹಂಸಲ್ಪುರದಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್‌ನಲ್ಲಿ ಕಂಪನಿಯ ಮೊದಲ ಜಾಗತಿಕ ಎಲೆಕ್ಟ್ರಿಕ್ ಕಾರು ‘ಇ-ವಿಟಾರಾವನ್ನು ಬಿಡುಗಡೆ ಮಾಡಿದರು.
ಭಾರತದಲ್ಲಿ ತಯಾರಾದ ಈ ಕಾರು 100 ಕ್ಕೂ ಹೆಚ್ಚು ದೇಶಗಳಿಗೆ, ಯುರೋಪ್ ಮತ್ತು ಜಪಾನ್ ಸೇರಿ, ರಫ್ತು ಆಗಲಿದೆ. “ಈಗ ವಿಶ್ವದ ಹಲವು ದೇಶಗಳ ರಸ್ತೆಗಳಲ್ಲಿ ಓಡುವ ಈ ವಾಹನಗಳ ಮೇಲೆ ಮೇಡ್ ಇನ್ ಇಂಡಿಯಾ ಅಚ್ಚುಕೆಯಾಗಲಿದೆ ಎಂದು ಪ್ರಧಾನಿ ಹೇಳಿದರು.
ಇದರಿಂದ ಭಾರತ-ಜಪಾನ್ ಸ್ನೇಹಕ್ಕೆ ಹೊಸ ಆಯಾಮ ಸಿಗುವುದರ ಜೊತೆಗೆ, ಮೇಕ್ ಇನ್ ಇಂಡಿಯಾಗೆ ಬಲ ಹೆಚ್ಚಲಿದೆ. ಮಾರುತಿ ಈಗಾಗಲೇ ನಾಲ್ಕು ವರ್ಷಗಳಿಂದ ಭಾರತದ ಅತಿದೊಡ್ಡ ಕಾರು ರಫ್ತುದಾರವಾಗಿದ್ದು, ಇಂದಿನಿಂದ ಎಲೆಕ್ಟ್ರಿಕ್ ಕಾರುಗಳೂ ಅದೇ ಹಾದಿಯಲ್ಲಿ ಸಾಗಲಿವೆ.
ಇದೇ ಸಂದರ್ಭದಲ್ಲಿ ಹಳೆಯ ವಾಹನಗಳನ್ನು ಹೈಬ್ರಿಡ್ ಆಂಬ್ಯುಲೆನ್ಸ್‌ಗಳಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ದೊರೆತಿದೆ. 11 ಸಾವಿರ ಕೋಟಿ ರೂ.ಗಳ ಯೋಜನೆಯಡಿ ಇ-ಆಂಬ್ಯುಲೆನ್ಸ್‌ಗಳನ್ನೂ ಪರಿಚಯಿಸಲಾಗುವುದು.
ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಜಪಾನ್ ರಾಯಭಾರಿ ಓನೊ ಕೀಚಿ ಹಾಗೂ ಸುಜುಕಿ ಕಂಪನಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa