ಭವಿಷ್ಯದ ಯುದ್ದಗಳಲ್ಲಿ ಸಂಯೋಜಿತ ಸಾಗಣೆ ವ್ಯವಸ್ಥೆ ಪ್ರಮುಖ : ಸಿಡಿಎಸ್
ಭೋಪಾಲ್, 26 ಆಗಸ್ಟ್ (ಹಿ.ಸ.) : ಆ್ಯಂಕರ್ : ಭವಿಷ್ಯದ ಯುದ್ಧಗಳಲ್ಲಿ ವಿಜಯ ಸಾಧಿಸಲು ಸ್ವಾವಲಂಬನೆ ಮತ್ತು ಸಂಯೋಜಿತ ಲಾಜಿಸ್ಟಿಕ್ಸ್ (ಸಾಗಣೆ ವ್ಯವಸ್ಥೆ) ಪ್ರಮುಖವಾಗಿವೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ತಿಳಿಸಿದ್ದಾರೆ. ಮಧ್ಯಪ್ರದೇಶದ ಡಾ. ಅಂಬೇಡ್ಕರ್ ನಗರದಲ್ಲಿರುವ ಸೇನಾ ಯು
Cds


ಭೋಪಾಲ್, 26 ಆಗಸ್ಟ್ (ಹಿ.ಸ.) :

ಆ್ಯಂಕರ್ : ಭವಿಷ್ಯದ ಯುದ್ಧಗಳಲ್ಲಿ ವಿಜಯ ಸಾಧಿಸಲು ಸ್ವಾವಲಂಬನೆ ಮತ್ತು ಸಂಯೋಜಿತ ಲಾಜಿಸ್ಟಿಕ್ಸ್ (ಸಾಗಣೆ ವ್ಯವಸ್ಥೆ) ಪ್ರಮುಖವಾಗಿವೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ತಿಳಿಸಿದ್ದಾರೆ.

ಮಧ್ಯಪ್ರದೇಶದ ಡಾ. ಅಂಬೇಡ್ಕರ್ ನಗರದಲ್ಲಿರುವ ಸೇನಾ ಯುದ್ಧ ಕಾಲೇಜಿನಲ್ಲಿ ನಡೆದ ‘ರಣ್ ಸಂವಾದ’ ತ್ರಿ-ಸೇವಾ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಅವರು, ಭವಿಷ್ಯದ ಯುದ್ಧಗಳು ಗಡಿಗಳನ್ನು ಗುರುತಿಸುವುದಿಲ್ಲ, ಆದ್ದರಿಂದ ತ್ವರಿತ ಮತ್ತು ಜಂಟಿ ಪ್ರತಿಕ್ರಿಯೆ ಅಗತ್ಯ ಎಂದರು.

ಯುದ್ಧಗಳನ್ನು ಗೆಲ್ಲಲು ಕೃತಕ ಬುದ್ಧಿಮತ್ತೆ, ಸೈಬರ್, ಕ್ವಾಂಟಮ್ ತಂತ್ರಜ್ಞಾನಗಳ ಅಳವಡಿಕೆ ಅವಶ್ಯಕ. ಜಂಟಿ ತರಬೇತಿ ಮತ್ತು ಕಾರ್ಯಾಚರಣಾ ಸಾಮರ್ಥ್ಯಗಳ ವೃದ್ಧಿಗೆ ಒತ್ತು ನೀಡಬೇಕು.

ನಾಗರಿಕ–ಸೈನ್ಯ ಏಕೀಕರಣ ಬಲಪಡಿಸುವುದು ಭವಿಷ್ಯದ ಯುದ್ಧಗಳಲ್ಲಿ ಕೀಲಿಕೈಯಾಗಿದೆ ಎಂದರು.

ಕೌಟಿಲ್ಯನನ್ನು ಉಲ್ಲೇಖಿಸಿ ಮಾತನಾಡಿದ ಅವರು ಭಾರತವು ಪ್ರಾಚೀನ ಕಾಲದಿಂದಲೇ ಜ್ಞಾನ ಮತ್ತು ತಂತ್ರಗಳ ಮೂಲವಾಗಿದೆ ಎಂದು ಹೇಳಿದರು. ಬಲಿಷ್ಠ, ಸುರಕ್ಷಿತ, ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಎಲ್ಲ ಪಾಲುದಾರರೂ ಸೇರುವಂತೆ ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande