ಪೂರ್ವ ಚಂಪಾರಣ್, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನ ಸಂಪರ್ಕ ಹೊಂದಿದ್ದ ಸೈಬರ್ ವಂಚಕರ ಬಂಧನ
ಬಿಹಾರದ ಪೂರ್ವ ಚಂಪಾರಣ್‌ನಲ್ಲಿ ಪಾಕಿಸ್ತಾನಿ ಸಂಪರ್ಕ ಹೊಂದಿದ್ದ ನಾಲ್ವರು ಅಂತರರಾಜ್ಯ ಸೈಬರ್ ವಂಚಕರು ಪೊಲೀಸರು ಬಂಧಿಸಿದ್ದಾರೆ.
ಪೋಲಿಸ್ ವರಿಷ್ಠಾಧಿಕಾರಿ ಸ್ವರ್ಣ್ ಪ್ರಭಾತ್ ಅವರ ನಿರ್ದೇಶನದಲ್ಲಿ ಸೈಬರ್ ಠಾಣೆ ಪೊಲೀಸರು ಬೈರಿಯಾ ಪ್ರದೇಶದಲ್ಲಿ ದಾಳಿ ನಡೆಸಿ ಅಖಿಲೇಶ್ ಕುಮಾರ್, ರೋಹಿತ್ ಕುಮಾರ್ ಅಲಿಯಾಸ್ ಶಿವ್, ಮನೀಶ್ ಕುಮಾರ್ ಮತ್ತು ಆನಂದ್ ಕುಮಾರನನ್ನು ಬಂಧಿಸಿದ್ದಾರೆ.
ವಿಚಾರಣೆಯಲ್ಲಿ, ಅಖಿಲೇಶ್ ಮತ್ತು ರೋಹಿತ್ ಪಾಕಿಸ್ತಾನದಿಂದ ವಾಟ್ಸಾಪ್ ವೀಡಿಯೊ ಕರೆಯ ಮೂಲಕ ಸೈಬರ್ ವಂಚನೆ ತರಬೇತಿ ಪಡೆದಿರುವುದು ಬಹಿರಂಗವಾಗಿದೆ. ಇವರಿಂದ 2 ಲ್ಯಾಪ್‌ಟಾಪ್, 12 ಮೊಬೈಲ್, 26 ಸಿಮ್ ಕಾರ್ಡ್, 62 ಡೆಬಿಟ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಪಾಕಿಸ್ತಾನಿ ಸಂಖ್ಯೆಗಳ ಪತ್ತೆಯಾಗಿದೆ.
ಮೊತಿಹಾರಿಯ ಮಹಿಳೆಯೊಬ್ಬರ ದೂರು ಆಧರಿಸಿ ತನಿಖೆ ನಡೆದಿದ್ದು, ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ನಕಲಿ ಐಡಿ ಸೃಷ್ಟಿಸಿ ಹಣಕ್ಕೆ ಬೆದರಿಕೆ ಹಾಕಿದ್ದರು. ಮಹಿಳೆಯಿಂದ ₹30,000 ವಂಚನೆ ನಡೆಸಿದ ಬಳಿಕ ಪ್ರಕರಣ ಬಯಲಾಗಿದೆ.
ಬಂಧಿತರಿಂದ ಬಿಹಾರ ಮಾತ್ರವಲ್ಲದೆ ಪಂಜಾಬ್, ಕೇರಳ, ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರ ಸೇರಿ ಹಲವೆಡೆ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa