ಮಹಿಳಾ ಡಿಪಿಎಲ್ 2025 : ಸೌತ್ ದೆಹಲಿ ಸೂಪರ್‌ಸ್ಟಾರ್ಸ್‌ಗೆ ಜಯ
ನವದೆಹಲಿ, 25 ಆಗಸ್ಟ್ (ಹಿ.ಸ.) : ಆ್ಯಂಕರ್ : ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಮಹಿಳಾ ದೆಹಲಿ ಪ್ರೀಮಿಯರ್ ಲೀಗ್ 2025ರ ರೋಮಾಂಚಕ ಫೈನಲ್‌ನಲ್ಲಿ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ತಂಡ ಕೇವಲ 1 ರನ್ ಅಂತರದಿಂದ ಸೆಂಟ್ರಲ್ ದೆಹಲಿ ಕ್ವೀನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯ
Dpl


ನವದೆಹಲಿ, 25 ಆಗಸ್ಟ್ (ಹಿ.ಸ.) :

ಆ್ಯಂಕರ್ : ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಮಹಿಳಾ ದೆಹಲಿ ಪ್ರೀಮಿಯರ್ ಲೀಗ್ 2025ರ ರೋಮಾಂಚಕ ಫೈನಲ್‌ನಲ್ಲಿ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ತಂಡ ಕೇವಲ 1 ರನ್ ಅಂತರದಿಂದ ಸೆಂಟ್ರಲ್ ದೆಹಲಿ ಕ್ವೀನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಸೂಪರ್‌ಸ್ಟಾರ್ಸ್ 20 ಓವರ್‌ಗಳಲ್ಲಿ 121/8 ರನ್ ಗಳಿಸಿತು. ನಾಯಕಿ ಶ್ವೇತಾ ಸೆಹ್ರಾವತ್ (34), ಶಿವಿ ಶರ್ಮಾ (29) ಹಾಗೂ ತನಿಶಾ ಸಿಂಗ್ (28) ಉತ್ತಮ ಆಟವಾಡಿದರು. ಕ್ವೀನ್ಸ್ ಪರ ಪ್ರಿಯಾ ಮಿಶ್ರಾ (2/19), ನಿಧಿ ಮಹತೋ (2/24) ಮತ್ತು ಸಚಿ (2/7) ಬೌಲಿಂಗ್‌ನಲ್ಲಿ ಮಿಂಚಿದರು.

122 ರನ್ ಗುರಿಯನ್ನು ಬೆನ್ನಟ್ಟಿದ ಕ್ವೀನ್ಸ್ ತಂಡ 120/8ಕ್ಕೆ ಸಿಮಿತವಾಯಿತು. ಮೋನಿಕಾ (33) ಹಾಗೂ ರಿಯಾ ಶೋಕೀನ್ (28*) ಹೋರಾಟ ಪಲ ನೀಡಲಿಲ್ಲ. ಸೂಪರ್‌ಸ್ಟಾರ್ಸ್ ಪರ ಮೇಧಾವಿ ಬಿಧುರಿ (3/26) ಮತ್ತು ಹಿಮಾಕ್ಷಿ ಚೌಧರಿ (2/18) ಪ್ರಮುಖ ವಿಕೆಟ್‌ಗಳನ್ನು ಪಡೆದರು.

ಕಳೆದ ಸಾಲಿನ ರನ್ನರ್-ಅಪ್ ಆಗಿದ್ದ ಸೂಪರ್‌ಸ್ಟಾರ್ಸ್ ಈ ಬಾರಿ ಕೇವಲ 1 ರನ್ ಅಂತರದ ಜಯದ ಮೂಲಕ ಮಹಿಳಾ ಡಿಪಿಎಲ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande