ನವದೆಹಲಿ, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬನಾರಸ್ ರೈಲು ಎಂಜಿನ್ ಕಾರ್ಖಾನೆ ದೇಶದಲ್ಲಿ ಮೊದಲ ಬಾರಿಗೆ ರೈಲ್ವೆ ಹಳಿಗಳ ಮೇಲೆ ನೇರವಾಗಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಸಾಧನೆಯೊಂದಿಗೆ ಭಾರತವು ಸ್ವಿಟ್ಜರ್ಲೆಂಡ್ ಹಾಗೂ ಜರ್ಮನಿಯ ನಂತರ ವಿಶ್ವದ ಮೂರನೇ ರಾಷ್ಟ್ರವಾಗಿದೆ.
ವಿಶೇಷ ವಿನ್ಯಾಸದ ಫಲಕಗಳನ್ನು ರಬ್ಬರ್ ಪ್ಯಾಡ್ ಹಾಗೂ ಎಪಾಕ್ಸಿ ಅಂಟಿನಿಂದ ಹಳಿಯ ಮಧ್ಯದಲ್ಲಿ ಅಳವಡಿಸಲಾಗಿದ್ದು, ಅವುಗಳನ್ನು 90 ನಿಮಿಷಗಳಲ್ಲಿ ತೆಗೆದು ಮರುಸ್ಥಾಪಿಸಬಹುದಾಗಿದೆ. ಪ್ರತಿ ಫಲಕದ ತೂಕ 32 ಕೆ.ಜಿ, ಗಾತ್ರ 2.2 ಮೀ × 1.1 ಮೀ.ಇದೆ
ಈ ಯೋಜನೆಯಡಿ ಬಿಎಚ್ಇಎಲ್ ದೇಶದ ಮೊದಲ 15 ಕಿಲೋವಾಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕ ವ್ಯವಸ್ಥೆಯನ್ನು ಸ್ಥಾಪಿಸಿದೆ. ಈಗಾಗಲೇ 3859 ಕಿಲೋವಾಟ್ ಸಾಮರ್ಥ್ಯದ ಘಟಕದ ಮೂಲಕ ವರ್ಷಕ್ಕೆ 42 ಲಕ್ಷ ಯೂನಿಟ್ ಶಕ್ತಿ ಉತ್ಪಾದಿಸಲಾಗುತ್ತಿದೆ.
1961ರಲ್ಲಿ ಕಾರ್ಯಾರಂಭಗೊಂಡ ಬನಾರಸ್ ಕಾರ್ಖಾನೆಯಿಂದ ಇದುವರೆಗೆ 10,860 ಎಂಜಿನ್‌ಗಳನ್ನು ತಯಾರಿಸಲಾಗಿದೆ. ವಿದೇಶಗಳಿಗೆ 174 ಎಂಜಿನ್‌ಗಳನ್ನು ರಫ್ತು ಮಾಡಿದ್ದು, ಪ್ರಸ್ತುತ ಮೊಜಾಂಬಿಕ್‌ಗೆ 10 ಎಂಜಿನ್ ಆರ್ಡರ್ ಇದೆ.
ಪರಿಸರ ಸಂರಕ್ಷಣೆಯ ಭಾಗವಾಗಿ ಒಳಚರಂಡಿ ನೀರು ಸಂಸ್ಕರಣಾ ಘಟಕ, ಭೂಗರ್ಭ ಜಲ ಮರುಪೂರಣ ಬಾವಿಗಳು ಹಾಗೂ ಸಾವಯವ ಗೊಬ್ಬರ ಘಟಕ ಸ್ಥಾಪಿಸಲಾಗಿದೆ.
ಈ ನೂತನ ಪ್ರಯೋಗ ಯಶಸ್ವಿಯಾದರೆ, ರೈಲ್ವೆ ಶಕ್ತಿಯಲ್ಲಿ ಸ್ವಾವಲಂಬನೆ ಮತ್ತು ಪರಿಸರ ಸ್ನೇಹಿ ಬೆಳವಣಿಗೆಗೆ ಇದು ಮಹತ್ವದ ಹೆಜ್ಜೆಯಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa