ನವದೆಹಲಿ, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಗುಜರಾತ್ ಪ್ರವಾಸಕ್ಕೆ ತೆರಳಲಿದ್ದಾರೆ. ಈ ವೇಳೆ ಅವರು 5,400 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ.
ಪ್ರಧಾನಿ ಇಂದು ಸಂಜೆ 6 ಗಂಟೆಗೆ ಅಹಮದಾಬಾದ್‌ನಲ್ಲಿ ರೋಡ್ ಶೋ ನಡೆಸಿ, ಖೋಡಲ್ಧಾಮ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಅವರು ಗಾಂಧಿನಗರ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಆಗಸ್ಟ್ 26 ರಂದು ಬೆಳಿಗ್ಗೆ ಹಂಸಲ್‌ಪುರದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಉತ್ಪಾದನಾ ಘಟಕ ಉದ್ಘಾಟಿಸಿ, 100 ದೇಶಗಳಿಗೆ ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳ ರಫ್ತಿಗೆ ಚಾಲನೆ ನೀಡಲಿದ್ದಾರೆ. ಜೊತೆಗೆ 1,400 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ.
ಇದರಲ್ಲೂ 530 ಕೋಟಿ ರೂ. ವೆಚ್ಚದ ಮಹೇಸಾನ–ಪಾಲನ್‌ಪುರ ರೈಲುಮಾರ್ಗ ದ್ವಿಗುಣಗೊಳಿಸುವಿಕೆ, 860 ಕೋಟಿ ರೂ. ವೆಚ್ಚದ ಕಲೋಲ್–ಕಾಡಿ–ಕಟೋಸನ್ ರೈಲು ಮಾರ್ಗ ಅಭಿವೃದ್ಧಿ, ಹಾಗೂ ಬೆಚ್ರಾಜಿ–ರಾನುಜ್ ರೈಲುಮಾರ್ಗದ ಗೇಜ್ ಪರಿವರ್ತನೆ ಯೋಜನೆಗಳು ಸೇರಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa