ನವದೆಹಲಿ, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಫಿಜಿ ಸಾಗರಗಳಿಂದ ಬೇರ್ಪಟ್ಟಿದ್ದರೂ, ನಮ್ಮ ಆಕಾಂಕ್ಷೆಗಳು ಒಂದೇ ದೋಣಿಯಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ನವದೆಹಲಿ ಹೈದರಾಬಾದ್ ಹೌಸ್‌ನಲ್ಲಿ ಫಿಜಿ ಪ್ರಧಾನಿ ಸಿಟಿವ್ನಿ ರಬುಕಾ ಅವರೊಂದಿಗಿನ ಮಾತುಕತೆ ಬಳಿಕ ಮಾತನಾಡಿದರು.
ಸಭೆಯ ವೇಳೆ ಉಭಯ ರಾಷ್ಟ್ರಗಳು 8 ಒಪ್ಪಂದಗಳಿಗೆ ಸಹಿ ಹಾಕಿ, 17 ಘೋಷಣೆಗಳನ್ನು ಮಾಡಿವೆ. ಆರೋಗ್ಯ, ಶಿಕ್ಷಣ, ಕೃಷಿ, ಸೈಬರ್ ಭದ್ರತೆ, ರಕ್ಷಣಾ ಸಹಕಾರ, ಕೌಶಲ್ಯಾಭಿವೃದ್ಧಿ, ಫಿಜಿಯಲ್ಲಿ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ, ಸೈಬರ್ ಭದ್ರತಾ ಕೇಂದ್ರ, ಡ್ರೋನ್ ಮತ್ತು ಮಣ್ಣು ಪರೀಕ್ಷಾ ಪ್ರಯೋಗಾಲಯ ಪೂರೈಕೆ ಸೇರಿದಂತೆ ಹಲವು ಒಪ್ಪಂದಗಳು ಜಾರಿಗೊಂಡವು.
ಸಂಯುಕ್ತ ಪ್ರಕಟಣೆಯಲ್ಲಿ, ಹವಾಮಾನ ಬದಲಾವಣೆ, ಇಂಡೋ-ಪೆಸಿಫಿಕ್ ಪ್ರದೇಶದ ಶಾಂತಿ-ಸ್ಥಿರತೆ ಹಾಗೂ ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ನೀಡಲು ಫಿಜಿ ಬೆಂಬಲ ವ್ಯಕ್ತಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa