ನವದೆಹಲಿ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ದೆಹಲಿ ವಿಧಾನ ಸಭೆಯಲ್ಲಿ ನಡೆದ ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದನವು ಪ್ರಜಾಪ್ರಭುತ್ವದ ಎಂಜಿನ್, ಅದರ ಕಲಾಪಕ್ಕೆ ಅಡ್ಡಿಪಡಿಸುವುದು ಆತಂಕಕಾರಿ ಪ್ರವೃತ್ತಿ ಎಂದರು.
ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿ ಪಕ್ಷ ಎರಡೂ ಅಗತ್ಯವಾದರೂ, ಸದನವನ್ನು ನಿರಂತರವಾಗಿ ಅಡ್ಡಿಪಡಿಸುವುದು ಜನರ ಆಕಾಂಕ್ಷೆಗಳ ವಿರುದ್ಧವಾಗಿದೆ ಎಂದು ಹೇಳಿದರು.
ಸದನವು ಕೇವಲ ಚರ್ಚೆಯ ವೇದಿಕೆ ಅಲ್ಲ, ಬದಲಿಗೆ ಬುದ್ಧಿವಂತಿಕೆ ಮತ್ತು ಚಿಂತನೆಯ ಸಂಗಮವಾಗಿದೆ. ಅರ್ಥಪೂರ್ಣ ಚರ್ಚೆಯ ಮೂಲಕವೇ ಜನಕಲ್ಯಾಣದ ಕಾನೂನುಗಳು ಸಾಧ್ಯ ಎಂದು ಹೇಳಿದರು.
ಸ್ವತಂತ್ರ ಭಾರತದ ಮೊದಲ ಕೇಂದ್ರ ವಿಧಾನಸಭಾಧ್ಯಕ್ಷರಾಗಿದ್ದ ಆಗಿದ್ದ ವಿಠ್ಠಲಭಾಯಿ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಿ, ಅವರ ಭಾಷಣಗಳು ಮತ್ತು ಬರಹಗಳನ್ನು ದೇಶದ ಎಲ್ಲಾ ವಿಧಾನ ಸಭಾ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಸಭಾಧ್ಯಕ್ಷರು ಸದನದ ರಕ್ಷಕರು ಮಾತ್ರವಲ್ಲ, ಅದರ ಸೇವಕರೂ ಆಗಿದ್ದಾರೆ. ಅವರ ವಿವೇಕಯುತ ನಿರ್ಧಾರಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ದೆಹಲಿ ವಿಧಾನಸಭಾ ಅಧ್ಯಕ್ಷ ವಿಜೇಂದರ್ ಗುಪ್ತಾ, ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಸೇರಿದಂತೆ ದೇಶದಾದ್ಯಂತದ ಸ್ಪೀಕರ್‌ಗಳು ಮತ್ತು ಸಭಾಪತಿಗಳು ಭಾಗವಹಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa