ಅಮೆರಿಕ ಜೊತೆ ಮಾತುಕತೆ ಮುಂದುವರೆದಿದೆ : ಜೈ ಶಂಕರ್
ನವದೆಹಲಿ, 23 ಆಗಸ್ಟ್ (ಹಿ.ಸ.) : ಆ್ಯಂಕರ್ : ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಮಾತುಕತೆ ಇನ್ನೂ ಅಂತ್ಯಕ್ಕೆ ತಲುಪಿಲ್ಲ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ತಿಳಿಸಿದ್ದಾರೆ. ಆದರೆ, ಭಾರತಕ್ಕೆ ಸಂಬಂಧಿಸಿದ ಕೆಲವು ‘ಕೆಂಪು ರೇಖೆಗಳು’ ಇದ್ದು, ಅವನ್ನು ದಾಟಲು ಸಾಧ್ಯವಿಲ್ಲ ಎಂದು ಸ್ಪಷ್ಟಪ
Jai shankar


ನವದೆಹಲಿ, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಮಾತುಕತೆ ಇನ್ನೂ ಅಂತ್ಯಕ್ಕೆ ತಲುಪಿಲ್ಲ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ತಿಳಿಸಿದ್ದಾರೆ.

ಆದರೆ, ಭಾರತಕ್ಕೆ ಸಂಬಂಧಿಸಿದ ಕೆಲವು ‘ಕೆಂಪು ರೇಖೆಗಳು’ ಇದ್ದು, ಅವನ್ನು ದಾಟಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ರೈತರ ಹಿತಾಸಕ್ತಿಗಳು, ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಪಾಕಿಸ್ತಾನದೊಂದಿಗೆ ಸಂಬಂಧಗಳ ಬಗ್ಗೆ ಯಾವುದೇ ಮಧ್ಯಸ್ಥಿಕೆ ಸ್ವೀಕರಿಸದಿರುವುದು ಭಾರತದ ಅಡಿಗಲ್ಲಿನ ನಿಲುವಾಗಿದೆ. ನಮ್ಮ ರಾಷ್ಟ್ರ ಹಿತಾಸಕ್ತಿಗಳ ಆಧಾರದ ಮೇಲೆ ಮಾತ್ರ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ,ಎಂದು ಅವರು ಹೇಳಿದರು.

ಟ್ರಂಪ್ ಆಡಳಿತದಲ್ಲಿ ವ್ಯಾಪಾರೇತರ ವಿಷಯಗಳಿಗೂ ಸುಂಕಗಳನ್ನು ವಿಧಿಸುವ ನೀತಿಯನ್ನು ಅವರು “ವಿಚಿತ್ರ”ವೆಂದು ವಿವರಿಸಿದರು. ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ನಿರ್ಬಂಧ ಹೇರಿರುವುದನ್ನು “ಕೆವಲ ನೆಪ” ಎಂದು ಜೈಶಂಕರ್ ಬಣ್ಣಿಸಿದ್ದಾರೆ.

ವಿದೇಶಾಂಗ ಸಚಿವರ ಪ್ರಕಾರ, ಭಾರತವು ತನ್ನ ರೈತರ ಹಾಗೂ ಸಣ್ಣ ವ್ಯಾಪಾರಿಗಳ ಹಿತಾಸಕ್ತಿಗಳ ಮೇಲೆ ರಾಜಿ ಮಾಡಿಕೊಳ್ಳುವುದಿಲ್ಲ. “ನಮ್ಮ ನೆರೆಹೊರೆಯ ಸಂಬಂಧಗಳಲ್ಲಿ ಯಾರ ಮಧ್ಯಸ್ಥಿಕೆಯೂ ಮಾನ್ಯವಲ್ಲ,” ಎಂದು ಪಾಕಿಸ್ತಾನದ ಪ್ರಶ್ನೆಯಲ್ಲಿಯೂ ಅವರು ದೃಢ ನಿಲುವು ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande