ಹೋಶಿಯಾರ್‌ಪುರದಲ್ಲಿ ಎಲ್‌ಪಿಜಿ ಟ್ಯಾಂಕರ್ ಸ್ಫೋಟ : 2 ಸಾವು, 28 ಜನರಿಗೆ ಗಾಯ
ಹೋಶಿಯಾರ್‌ಪುರ, 23 ಆಗಸ್ಟ್ (ಹಿ.ಸ.) :ಆ್ಯಂಕರ್ : ಪಂಜಾಬ್‌ನ ಹೋಶಿಯಾರ್‌ಪುರದ ಮಂಡಿಯಾಲ ಗ್ರಾಮದ ಬಳಿ ಶುಕ್ರವಾರ ರಾತ್ರಿ ಎಲ್‌ಪಿಜಿ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದು, 28 ಜನರಿಗೆ ಗಾಯಗಳಾಗಿವೆ. ಸ್ಫೋಟದಿಂದ 12ಕ್ಕೂ ಹೆಚ್ಚು ಅಂಗಡಿಗಳು ಹಾಗೂ ನಾಲ್ಕು ಮನೆಗಳು ಸುಟ್ಟು ಭಸ್ಮವಾಗಿವೆ.

ಘಟನೆ ಬಳಿಕ ಪೊಲೀಸರು ಒಂದು ಕಿಲೋಮೀಟರ್ ವ್ಯಾಪ್ತಿಯೊಳಗಿನ ಜನರನ್ನು ಸ್ಥಳಾಂತರಿಸಿದ್ದಾರೆ. ಹೋಶಿಯಾರ್‌ಪುರ, ದಾಸುಯಾ ಹಾಗೂ ತಲ್ವಾರ್ ಅಗ್ನಿಶಾಮಕ ದಳಗಳು ತಕ್ಷಣ ಧಾವಿಸಿ ಬೆಂಕಿ ನಂದಿಸಿದವು.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯವರನ್ನು ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಕಳುಹಿಸಲಾಗಿದೆ.

ಅಪಘಾತದ ಸ್ಥಳದ ಹತ್ತಿರವೇ ಅನಿಲ ಸಂಗ್ರಹಣಾ ಘಟಕವಿದ್ದರೂ ಬೆಂಕಿ ಅಲ್ಲಿಗೆ ತಲುಪದ ಕಾರಣ ದೊಡ್ಡ ದುರಂತ ತಪ್ಪಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

 rajesh pande