ಹಿಜ್ಬುಲ್ ಮುಜಾಹಿದ್ದೀನ್‌ನ ಭೂಗತ ಕಾರ್ಯಕರ್ತನ ಬಂಧನ
ಶ್ರೀನಗರ, 23 ಆಗಸ್ಟ್ (ಹಿ.ಸ.) : ಆ್ಯಂಕರ್ : ಜಮ್ಮು-ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ ಶೋಪಿಯಾನ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸ್ಲೀಪರ್ ಸೆಲ್ ಸದಸ್ಯನನ್ನು ಬಂಧಿಸಿದೆ. ರೆಬನ್ ಗುಂಡ್ ನಿವಾಸಿ ಅಲ್ತಾಫ್ ಹುಸೇನ್ ವಾಗೆ, ಹಿಜ್ಬುಲ್ ಮುಜಾಹಿದ್ದೀನ್‌ನ ಭೂಗತ ಕಾರ್ಯಕರ್ತ ಆಗಿ ಕಾರ್ಯನಿ
ಹಿಜ್ಬುಲ್ ಮುಜಾಹಿದ್ದೀನ್‌ನ ಭೂಗತ ಕಾರ್ಯಕರ್ತನ ಬಂಧನ


ಶ್ರೀನಗರ, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜಮ್ಮು-ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ ಶೋಪಿಯಾನ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಸ್ಲೀಪರ್ ಸೆಲ್ ಸದಸ್ಯನನ್ನು ಬಂಧಿಸಿದೆ. ರೆಬನ್ ಗುಂಡ್ ನಿವಾಸಿ ಅಲ್ತಾಫ್ ಹುಸೇನ್ ವಾಗೆ, ಹಿಜ್ಬುಲ್ ಮುಜಾಹಿದ್ದೀನ್‌ನ ಭೂಗತ ಕಾರ್ಯಕರ್ತ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಎಸ್‌ಐಎ ಹೇಳಿಕೆಯ ಪ್ರಕಾರ, ಅಲ್ತಾಫ್ ಭಾರತ ವಿರೋಧಿ ಪ್ರಚಾರ, ಕೋಮು ದ್ವೇಷ ಪ್ರಚೋದನೆ ಮತ್ತು ಉಗ್ರ ಪಿತೂರಿಯಲ್ಲಿ ಸಕ್ರಿಯ ಪಾತ್ರವಹಿಸಿದ್ದಾನೆ. ಅವನ ವಿರುದ್ಧ UAPA ಸೆಕ್ಷನ್ 13, 18, 18-B, 38 ಮತ್ತು 39 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈತನ ಬಂಧನವು ಕಣಿವೆಯಲ್ಲಿ ಸ್ಲೀಪರ್ ಸೆಲ್‌ಗಳ ಜಾಲ ಪತ್ತೆಗೆ ಪ್ರಮುಖ ಯಶಸ್ಸು ಎಂದಿರುವ ಎಸ್‌ಐಎ, ಇತರ ಉಗ್ರ ಸಂಘಟನೆಗಳೊಂದಿಗೆ ಅವನ ಸಂಪರ್ಕವಿದೆಯೇ ಎಂಬುದರ ಬಗ್ಗೆ ವಿಚಾರಣೆ ಮುಂದುವರೆಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande