ನವದೆಹಲಿ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಟಿಡಿಪಿ ಸಂಸದರೊಂದಿಗೆ ನವದೆಹಲಿಯಲ್ಲಿ ರಾಧಾಕೃಷ್ಣನ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಧಾಕೃಷ್ಣನ್ ಸೂಕ್ತ ಅಭ್ಯರ್ಥಿ, ಎನ್‌ಡಿಎ ಭಾಗವಾಗಿರುವ ಟಿಡಿಪಿ ಸಹಜವಾಗಿಯೇ ಅವರನ್ನು ಬೆಂಬಲಿಸುತ್ತದೆ ಎಂದು ಹೇಳಿದರು.
ರಾಧಾಕೃಷ್ಣನ್ ಅತ್ಯುತ್ತಮ ಅಭ್ಯರ್ಥಿ, ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ನಾಯ್ಡು ಕರೆ ನೀಡಿ, ಎನ್‌ಡಿಎಗೆ ಬಹುಮತವಿರುವುದರಿಂದ ನಾವು ಸುಲಭವಾಗಿ ಗೆಲ್ಲಲಿದ್ದೇವೆ ಎಂದು
ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa