ವಿಜಯಪುರ, 02 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಪ್ರಕರಣದಲ್ಲಿ ಕೋರ್ಟ್‌ಗೆ ತೀರ್ಪಿಗೆ ನಾವು ತಲೆ ಬಾಗಲೇಬೇಕು ಎಂದು ವಿಜಯಪುರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಕುಮಾರಿ ಮಂಜುಳಾ ಹೇಳಿದರು.
ಜನಪ್ರತಿನಿಧಿಗಳಾಗಿ ಈ ತರಹ ನಡುವಳಿಕೆ ಖಂಡನೀಯ. ಇದನ್ನು ನಾವು ಸಹಿಸೋಕೆ ಆಗಲ್ಲ. ಹಿಂದೆ ಮುಂದೆ ಮಾಡುವುಂತದ್ದು ಏನು ಇಲ್ಲ. ಸಾರ್ವಜನಿಕವಾಗಿ ಬರುವವರಿಗೆ ಸಚ್ಚಾ ತುಂಬಾ ಮುಖ್ಯ ಎಂದರು.
ಅಲ್ಲದೇ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಕೇಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ನ್ಯಾಯಾಲಯದಲ್ಲಿ ಇದೆ. ಇದೊಂದು ಪ್ರಕರಣ ದುರುದ್ದೇಶದಿಂದ ಕೂಡಿದೆ. ಅದು ನ್ಯಾಯಾಲಯದಲ್ಲಿ ಇರೋದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande