ರೇಷ್ಮೆ,ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಜಾಗೃತಿ
ರೇಷ್ಮೆ,ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಜಾಗೃತಿ
ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಗ್ರಾಮೀಣ ಜನತೆಗೆ ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರಪದ್ದತಿ ಕುರಿತು ಜಾಗೃತಿ ಮೂಡಿಸಲಾಯಿತು.


ಕೋಲಾರ, 0೨ ಆಗಸ್ಟ್ (ಹಿ.ಸ) :

ಆ್ಯಂಕರ್ : ತಾಲ್ಲೂಕಿನ ಸುಗಟೂರು ಹೋಬಳಿಯ ಚಿಟ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಅಂತಿಮ ವರ್ಷದ ಬಿಎಸ್ಸಿ(ಆನ್ಸ್) ಕೃಷಿ ವಿಧ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ-೨೦೨೫-೨೬ ಶಿಬಿರದಲ್ಲಿ ಗ್ರಾಮೀಣ ಜನತೆಗೆ ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರಪದ್ದತಿ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಹಾರ ಪೋಷಣೆ ಮತ್ತು ಅದರ ಮಹತ್ವ ಕಾರ್ಯಕ್ರಮದ ಕುರಿತು ಮಾಹಿತಿ ವನೀಡಿ, ಉತ್ತಮ ಆಹಾರ ಸೇವನೆಯಿಂದ ರೋಗ ಮುಕ್ತ ಜೀವನ ಸಾಧ್ಯ. ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಆಹಾರ ತುಂಬಾ ಮುಖ್ಯ ಮನುಷ್ಯನ ಆರೋಗ್ಯವನ್ನು ನಿರ್ಧರಿಸುವುದೇ ಆಹಾರ ಎಂದು ತಿಳಿಸಿ, ಅಪೌಷ್ಟಿಕತೆ ನಿವಾರಣೆಗೆ ಎಂತಹ ಆಹಾರ ಸೇವಿಸಬೇಕು ಎಂದು ತಿಳಿಸಿಕೊಡಲಾಯಿತು.

ಅತಿಪೌಷ್ಟಿಕತೆ ಮತ್ತು ಅಪೌಷ್ಟಿಕತೆಯ ನಿವಾರಣೆ ಹೇಗೆ ಎಂಬುದರ ಕುರಿತು ಅರಿವು ಮೂಡಿಸಲಾಯಿತು. ಮನುಷ್ಯನ ಆಹಾರ ಸೇವನೆಯಲ್ಲಿ, ವಿಟಮಿನ್ ಎ , ವಿಟಮಿನ್ ಬಿ ೬, ಬಿ ೯, ಬಿ೧೨, ವಿಟಮಿನ್ ಸಿ, ವಿಟಮಿನ್ ಡಿ ಮತ್ತು ವಿಟಮಿನ್ ಕೆ ಕೊರತೆಯಿಂದ ಆಗುವ ಪರಿಣಾಮಗಳನ್ನು ಮಾದರಿ ಸಹಿತ ವಿವರಿಸಲಾಯಿತು. ಕಾರ್ಯಕ್ರಮದಲ್ಲಿ ರಾಗಿ ಲಡ್ಡುವನ್ನು ಹಾಗೂ ಹೆಸರುಕಾಳಿನ ಲಡ್ಡುವನ್ನು ಮಾಡುವ ವಿಧಾನವನ್ನು ತಿಳಿಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿಯಾದ ಡಾ.ಪೂಜಾ ಕೋಲಾರ್ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ ಅವರು ಮಾತನಾಡಿ ಮುಖ್ಯವಾಗಿ ಬಾಣಂತಿಯರು, ಗರ್ಭಿಣಿ ಸ್ತಿçÃಯರು ಮತ್ತು ಮಕ್ಕಳು ಸಮತೋಲನ ಆಹಾರವನ್ನು ಸೇವನೆ ಮಾಡಬೇಕೆಂದು ಕರೆ ನೀಡಿದರು. ಮತ್ತು ಯಾವ ಪದಾರ್ಥವನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂದು ಕಬ್ಬಿಣಾಂಶ ಮತ್ತು ವಿಟಮಿನ್ ಉಳ್ಳ ಪದಾರ್ಥಗಳನ್ನು ಸೇವನೆ ಮಾಡಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಮಾನಸಾ ಪ್ರಾಥಮಿಕ ಆರೋಗ್ಯ ಕೇಂದ್ರ ಸುಗಟೂರು, ವರಲಕ್ಷಿ÷್ಮ ಶಿಕ್ಷಕಿ ಸರ್ಕಾರಿ ಪ್ರಾಥಮಿಕ ಶಾಲೆ ಚಿಟ್ನಹಳ್ಳಿ, ಸುಗುಣ ಸಿ.ಎಸ್ ಶಿಕ್ಷಕಿ ಅಂಗನವಾಡಿ ಚಿಟ್ನಹಳ್ಳಿ, ಅನಿತಾ ಆಶಾ ಕಾರ್ಯಕರ್ತೆ ಮತ್ತು ರೈತರಾದ ಪುರುಷೋತ್ತಮ್, ನಾಗರಾಜ್, ಮುನಿ ವೆಂಕಟರೆಡ್ಡಿ ಭಾಗಿಯಾಗಿದ್ದರು.

ವಿದ್ಯಾರ್ಥಿಗಳಾದ ಸೋಹನ್ ಸೃಜನ್ ಸಿದ್ದುಬಾ ಶ್ರೀ ವಿಷ್ಣುತೇಜ್, ಸುಹಾನ್, ಸುನಿಲ್ ಕುಮಾರ್, ಸನತ್ ಕುಮಾರ್, ಶ್ರೇಯ, ಸ್ಪೂರ್ತ, ಸೋನುಪ್ರಿಯ, ಶ್ವೇತಾ ಶಾಂತಲಾ, ಶ್ವೇತಾ ಎನ್ ಆರ್, ಸ್ಮಿತಾ ಕಾರ್ಯಕ್ರಮ ನಡೆಸಿಕೊಟ್ಟರು.

ಚಿತ್ರ ; ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಗ್ರಾಮೀಣ ಜನತೆಗೆ ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರಪದ್ದತಿ ಕುರಿತು ಜಾಗೃತಿ ಮೂಡಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande